ರೈತರು ಊಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಹಾಗಾಗಿ ರೈತರು ಆಧುನಿಕ ತಂತ್ರಜ್ಞಾನಬಳಸಿ ಕೃಷಿ ಮಾಡುವುದರೊಂದಿಗೆ, ಸಾವಯವ ಕೃಷಿಗೆಹೆಚ್ಚು ಒತ್ತುಕೊಟ್ಟು ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದು ಪೂಜ್ಯ ಶ್ರೀ ಶಂಕರಲಿಂಗ ಶಿವಾಚಾರ್ಯರು ನುಡಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಔರಾದ ಪಟ್ಟಣದ ದತ್ತಾತ್ರೇಯ ಮಂದಿರದಲ್ಲಿ ಉಚಿತವಾಗಿ ತರಕಾರಿ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಘದ ಜಿಲ್ಲಾ ಪ್ರಮುಖರಾದ ರೇವಣಸಿದ್ದ ಜಾಡರ್ ಮಾತನಾಡಿ, ಸಂಘದಿಂದ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಎನ್ನುವಂತೆ ಹತ್ತುಹಲವು ಯೋಜನೆಗಳು ರೂಪಿಸಲಾಗಿದ್ದು ರೈತರಿಗಾಗಿ ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡುಲಾಗುತ್ತಿದೆ.
ಇಂದು ಕೋತ್ತಂಬರಿ, ಸೌತೆಕಾಯಿ ಬಿನೀಸ್, ಹಿರೇಕಾಯಿ, ಮೆಣಸಿನ ಬೀಜ ಸೇರಿ ಒಟ್ಟು ಐದು ವಿಧದ ತರಕಾರಿ ಬೀಜ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಒಟ್ಟು ಜಿಲ್ಲಾದ್ಯಾದಂತ 10,000 ರೈತರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ನುಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಂಘದ ಜಿಲ್ಲಾ ಸಂಚಾಲಕರಾದ ಪ್ರಶಾಂತ ಸಿಂಧೆ , ರೈತ ಸಂಘದ ತಾಲೂಕು ಅಧ್ಯಕ್ಷ, ಮಾಜಿ ತಾಲೂಕ ಪಂಚಾಯತ ಸದಸ್ಯ, ರೈತ ರೈತ ಮುಖಂಡರು ಮತ್ತು ತಾಲೂಕ ಸಂಚಾಲಕರು ಉಪಸ್ಥಿತರಿದ್ದರು.