ಔರಾದ: ದುಡಿಮೆಯೇ ದೇವರೆಂದು ಭಾವಿಸಿ, ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ್ಯಾಗ ಗೌರವಕ್ಕೆ ಅರ್ಹವಾಗಿದೆ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು. ಸಂತಪುರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರಿಂದಲೇ ದೇಶ ಸ್ವಚ್ಛ, ಸುಂದರ, ಸುರಕ್ಷಿರ್ಮಿಕರಿಲ್ಲದೇ ದೇಶದ ಪ್ರತ ಮತ್ತು ಕಾಗತಿ ಇಲ್ಲ. ಮಾಲೀಕನ ಮಟ್ಟಕ್ಕೆ ಬೆಳೆಸಿದವರು ನಾನು ಬೆಳೆಯದಿದ್ದರೂ ತನ್ನ ಯಜಮಾನ ಬೆಳೆಯಲಿ ಎಂಬುವರೇ ಕಾರ್ಮಿಕರು ಎಂದ ಅವರು, 12ನೇ ಶತಮಾನದ ಬಸವಾದಿ ಶರಣರು ಕಾಯಕವೇ ಕೈಲಾಸಕ್ಕೆ ಮಹತ್ವ ನೀಡಿ ಕೊಟ್ಟ ಕೊಡುಗೆ ಇಂದು ನಮಗೆ ಕಾರ್ಯನಿರತರಾಗಲು ಸಾಧ್ಯವಾಗಿದೆ. ಕೋವಿಡ್-19ನಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರ ಶ್ರಮ ಎಂದೆಂದಿಗೂ ಮರೆಯಲಾಗದು ಎಂದರು.
ಶಾಲಾ ಕಾಲೇಜಿನ ಡ್ರೈವರ್ ಕಾರ್ಮಿಕರುಗಳಾದ ಚೆನ್ನಪ್ಪ ವಾಲ್ದೊಡ್ಡೆ, ಸಂಗಯ್ಯ ಸ್ವಾಮಿ, ಸಂಗಶೆಟ್ಟಿ ಗಂದಿಗುಡೆ, ಶಿವಶಂಕರ ಸಾವಳೆ, ಸೋಮನಾಥ ಬಿರಾದರ, ಸ್ವಚ್ಛತಾ ಕಾರ್ಮಿಕರುಗಳಾದ ಅಂಬಾಬಾಯಿ ಟೆಳೇಕರ, ಶಿವಮಂಗಲಾ ಲಕ್ಕೆ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಸುರೇಖಾ ದಡ್ಡೆ ಇತರರಿದ್ದರು.