News Karnataka
ಸಿಟಿಜನ್ ಕಾರ್ನರ್

ವಡಗಾಂವನಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂಭ್ರಮ

Veerabhadreswara Jatra Mahotsava celebrations at Vadgaon
Photo Credit : by Author

ಔರಾದ: ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ಶುಕ್ರವಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.

ಶುಕ್ರವಾರ ನಸುಕಿನ ಜಾವಾ 5 ಗಂಟೆಗೆ ವೀರಭದ್ರೇಶ್ವರ ಮಂದಿರದಿಂದ ಸಂಗಮೇಶ್ವರ ಮಂದಿರದವರೆಗೆ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ನಂತರ ಜಾತ್ರೆಯ ಪ್ರಮುಖ ಕಾರ್ಯಕ್ರಮವಾದ ಅಗ್ನಿ ಪ್ರವೇಶಕ್ಕೆ ವೀರಭದ್ರೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ ಬಸವರಾಜ ದೇಶಮುಖ ಅವರು ವೀರಭದ್ರೇಶ್ವರ ಪಲ್ಲಕ್ಕಿ ಹಾಗೂ ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನೂರಾರು ಭಕ್ತರು ವೀರಭದ್ರೇಶ್ವರ ಮಹಾರಾಜ ಕೀ ಜೈ ಹಾಗೂ ಓಂ ಭಲಾ ಶಂಕರ ಭಲಾ ಎಂಬ ಘೋಷಣೆ ಮೊಳಗಿಸುವ ಮೂಲಕ ಅಗ್ನಿ ಕುಂಡವನ್ನು ಸುತ್ತುಹಾಕಿದರು.

ಬೆಳಗ್ಗೆ 10ರಿಂದ ಸಂಜೆಯ ವರೆಗೂ ಭಕ್ತರಿಗೆ ಪ್ರಸಾದದ ವ್ಯೆವಸ್ಥೆ ಮಾಡಲಾಯಿತು. ಹುಗ್ಗಿ, ಅನ್ನ, ಸಾಂಬಾರ ಸವಿದ ಭಕ್ತಾದಿಗಳು. ಸಾಯಂಕಾಲ ದೇಶಮುಖ್ ಮನೆತನದರಿಂದ ರಥಕ್ಕೆ ಪೂಜೆ ಮತ್ತು ಮಹಾ ಮಂಗಳಾರತಿ ಮಾಡುವ ಮೂಲಕ ರಥೋತ್ಸವ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಯುವಕರು ಕನ್ನಡದ ಡಿಜೆ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಮೆರವಣಿಗೆಯ  ಉದ್ದಕ್ಕೂ ಆಕರ್ಷಣೀಯ ಸಿಡಿಮದ್ದುಗಳ ಪ್ರದರ್ಶನ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಬಸವರಾಜ್ ದೇಶಮುಖ್, ಶರಣಬಸಪ್ಪ ದೇಶಮುಖ್, ಜಗನಾಥ ಪಟ್ನೆ, ಶರಣಪ್ಪ ಖಳೂರೆ, ಪ್ರಕಾಶ ದೇಸಾಯಿ, ಶರಣಪ್ಪ ಭೂಶೆಟ್ಟೆ, ಬಂಡಯ್ಯ ಸ್ವಾಮಿ, ಶಂಕರಯ್ಯಾ ಗುಮ್ಮೆ, ರತಿಕಾಂತ ನೇಳಗೆ, ರಾಜಕುಮಾರ ಹೇಡೆ, ಓಂಕಾರ್ ಮೇತ್ರೆ, ಸಂಗಮೇಶ ಕಲ್ಲಾ, ಚಂದು ನೇಳಗೆ, ಬಸವ ಚಿಕಲಿಂಗೆ, ಹಾವಗಿರಾವ ನೇಳಗೆ, ಶಂಕ್ರಪ್ಪ ಧರ್ಮುಜೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *