ಔರಾದ: ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ಜ.19 ಮತ್ತು 20 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ವೀರಭದ್ರೇಶ್ವರ ದೇವಸ್ಥಾನದದ ಕಮಿಟಿ ವಡಗಾಂವ ದೇ ಅಧ್ಯಕ್ಷ ಬಸವರಾಜ ದೇಶಮುಖ ತಿಳಿಸಿದ್ದಾರೆ.
ಗ್ರಾಮದ ವೀರಭದ್ರೇಶ್ವರ ಮಂದಿರದಲ್ಲಿ ಜನವರಿ 19ರಂದು ಬೆಳಗ್ಗೆ 9 ಗಂಟೆಗೆ ರುದ್ರಾಭಿಷೇಕ, ರಾತ್ರಿ 8 ಗಂಟೆಗೆ ಗ್ರಾಮದ ಭಜನೆ ಮಂಡಳಿ ವತಿಯಿಂದ ಭಜನೆ, ವಚನ ಗಾಯನ ಕಾರ್ಯಕ್ರಮ ಜರುಗಲಿದೆ. 20 ರಂದು ಬೆಳಗ್ಗೆ 5.30ಕ್ಕೆ ಪಲ್ಲಕ್ಕಿ ಉತ್ಸವ, 9 ಗಂಟೆಗೆ ಅಗ್ನಿ ಪ್ರವೇಶ ನಂತರ ಮಹಾ ಪ್ರಸಾದ. ಅಂದು ಸಂಜೆ 5:30 ಗಂಟೆಗೆ ಅದ್ದೂರಿಯಾಗಿ ರಥೋತ್ಸವ ಕಾರ್ಯಕ್ರಮ ಜರುಗಲಿವೆ.
ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಸದ್ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ತನು-ಮನ ಧನದಿಂದ ಸೇವೆ ಸಲ್ಲಿಸಿ, ವೀರಭದ್ರೇಶ್ವರ ದೇವರ ದರ್ಶನ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕರಾದ ಬಸವರಾಜ ದೇಶಮುಖ ಮನವಿ ಮಾಡಿದರು.