ಔರಾದ: ನೀರು ಆರೋಗ್ಯಕ್ಕೆ ಅಮೃತವಾಗಿದೆ ಎಂದು ವೈದ್ಯಾಧಿಕಾರಿ ಸಂಗಮೇಶ ಬಿರಾದರ ಹೇಳಿದರು. ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಸಂತಪುರ್ ಗ್ರಾಮದಲ್ಲಿ ಬಸವ ಜಯಂತಿಯ ಪ್ರಯುಕ್ತವಾಗಿ ಉಚಿತ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯ ಉತ್ತಮವಾಗಿ ಇರಬೇಕಾದರೆ ಮಾನವನ ಶರೀರದಲ್ಲಿ ನೀರಿನ ಅಂಶ ಹೆಚ್ಚಾಗಿರಬೇಕು. ಮಾನವನ ಜೀವನದಲ್ಲಿ ನೀರು ಅತ್ಯಮೂಲ್ಯ ತನ್ನದೇ ಆದ ಮಹತ್ವವನ್ನು ಹೊಂದಿದೆ. ಸುಡು ಬಿಸಿಲಿನಲ್ಲಿ ಸಿದ್ದರಾಮೇಶ್ವರ ಕಾಲೇಜನವರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಪುಣ್ಯಕಾರ್ಯ ಎಂದು ಹೇಳಿ ತಾನು ಈ ಮಡಿಕೆಯಲ್ಲಿ ಪ್ರತಿದಿನ 20 ಲೀಟರ್ ಶುದ್ಧ ಕುಡಿಯುವ ನೀರು ನೀಡುವುದಾಗಿ ಹೇಳಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಸತತ ಎರಡನೇ ವರ್ಷ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ. ಮತ್ತೆ ಅವಕಾಶ ಸಿಕ್ಕರೆ ಮುಂದಿನ ವರ್ಷವೂ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಹಿರಿಯ ಮುಖಂಡರಾದ ಶರಣಪ್ಪ ಬಿರಾದರ, ಬಸಯ್ಯಸ್ವಾಮಿ, ಸಂತೋಷ ಬಿಜಲವಾಡೆ, ಸುನಿಲ್ ಪಾಟೀಲ, ವೈಜಿನಾಥ ನಿಟ್ಟೂರೆ, ಗಣಪತಿ ವಾಸುದೇವ, ತುಕಾರಾಮ ಹಸನ್ಮುಖಿ, ಆಕಾಶ್ ಸ್ವಾಮಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಸುರೇಖಾ ದಡ್ಡೆ ಮತ್ತು ಇತರರು ಉಪಸ್ಥಿತರಿದ್ದರು.