ಔರಾದ: ವಿಶ್ವಕ್ಕೆ ಜ್ಞಾನ, ಮಾನವೀಯ ಮೌಲ್ಯ ನೀಡಿ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದವರು ಕರುಣೆಯ ಸಾಕಾರರೂಪಿ ಗೌತಮ ಬುದ್ಧರು ಎಂದು ಪ್ರಾಂಶುಪಾಲ ನವೀಲ್ ಕುಮಾರ್ ಉತ್ಕಾರ್ ಹೇಳಿದರು.
ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಭಗವಾನ್ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ಗೌತಮ ಬುದ್ಧರ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕಿ ವೀರಾತಾಯಿ ಕಾಂಬಳೆ ಮಾತನಾಡಿ, ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸುತ್ತವೆ ಎನ್ನುವುದು ಗೌತಮ ಬುದ್ಧರ ಬೋಧನೆಗಳಾಗಿವೆ ಎಂದರು. ಉಪನ್ಯಾಸಕ ಶಿವಪುತ್ರ ಧರಣಿ ಮಾತನಾಡಿದರು. ಈ ಸಂದರ್ಭದಲ್ಲಿ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ ಇತರರು ಇದ್ದರು.