ಔರಾದ: ರವೀಂದ್ರ ಕಲ್ಲಯ್ಯಾ ಸ್ವಾಮಿಯವರಿಗೆ ನೀಡಿರುವ ಬೇಡ ಜಂಗಮ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ರದ್ದು ಪಡಿಸಿರುವುದು ಖಂಡನೀಯ ರಾಜಕೀಯವಾಗಿ ಜಂಗಮ ಸಮಾಜವನ್ನು ತುಳಿಯುವ ಹುನ್ನಾರ ಕಂಡು ಬರುತ್ತಿದೆ, ಕೂಡಲೇ ಅವರ ಜಾತಿ ಪ್ರಮಾಣ ಪತ್ರ ರದ್ದು ಆದೇಶ ಹಿಂಪಡೆಯಬೇಕೆಂದು ಔರಾದ ತಾಲೂಕು ಬೇಡ ಜಂಗಮ ಸಮಾಜ ಬಾಂಧವರು ಆಗ್ರಹಿಸಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಾನ್ಯ ತಹಸೀಲ್ದಾರ ಅವರ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಜಂಗಮ ಸಮಾಜದ ಮುಖಂಡ ಮಲ್ಲಯ್ಯ ಸ್ವಾಮಿ ಮಾತನಾಡಿ, ರವೀಂದ್ರ ಸ್ವಾಮಿ ಔರಾದ್ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಜಿಲ್ಲಾಧಿಕಾರಿಗಳು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದುಪಡಿಸಿದ್ದಾರೆ. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿ, ಪಾರದರ್ಶಕ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನೆಹರು, ಮಲ್ಲಯ್ಯ ಸ್ವಾಮಿ, ಸೂರ್ಯಕಾಂತ ಸ್ವಾಮಿ, ಬಸಯ್ಯ ಸ್ವಾಮಿ, ಶಿವಾನಂದ ಸ್ವಾಮಿ, ಗಂಗಾಧರ ಸ್ವಾಮಿ, ಷಣ್ಮುಖ ಸ್ವಾಮಿ, ಸಚ್ಚಿದಾನಂದ ಸ್ವಾಮಿ, ರತಿಕಾಂತ ಸ್ವಾಮಿ, ರಾಚಯ್ಯ ಸ್ವಾಮಿ ಸೇರಿ ಅನೇಕರಿದ್ದರು.