ಔರಾದ: ನಾಳೆ ಫೆ. 26ರಂದು ಪಟ್ಟಣದ ಗುರುಪಾದಪ್ಪನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಜಂಗಮ ವಿರಾಟ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವೀರಶೈವ ಸಮಾಜ ಹಾಗೂ ಜಂಗಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕೆಂದು ಪೂಜ್ಯ ಷ. ಬೃಶಂಕರಲಿಂಗ ಶಿವಾಚಾರ್ಯರು ತಿಳಿಸಿದ್ದಾರೆ.
ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾವೇಶದಲ್ಲಿ ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗ ಮಹಾಸ್ವಾಮಿಗಳು ವಿರಾಟ ಸಂದೇಶ ನೀಡಲಿದ್ದಾರೆ. ಡೋಣಗಾಪೂರ ಶ್ರೀಮಠದ ಪೂಜ್ಯ ಷ.ಬೃರಾಜೇಶ್ವರ ಶಿವಾಚಾರ್ಯರು ಹಾಗೂ ತಾಲೂಕಿನ ಹೆಡಗಾಪೂರ ಮಠದ ಶಿವಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ, ಡೋಣಗಾಂವ ಮಠದ ಡಾ. ಶಂಭುಲಿಂಗ ಶಿವಾಚಾರ್ಯರು, ಠಾಣಾ ಕುಶನೂರ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸೋನಾಳ ಚನ್ನವೀರ ಮಹಾಸ್ವಾಮಿಗಳು, ಮುಧೋಳ ಶಿವಲಿಂಗಶಿವಾಚಾರ್ಯರು, ಗುಡಪಳ್ಳಿ ಚಂದ್ರಶೇಖರ ಶಿವಾಚಾರ್ಯರು ಹಾಗೂ ಕೌಳಾಸ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ಜಂಗಮ ಬಾಂಧವರ ಶಕ್ತಿ ಪ್ರದರ್ಶನ ಜರುಗಲಿದೆ.
ಜಂಗಮ ಸಮಾಜವನ್ನು ಸಂಪೂರ್ಣವಾಗಿ ಸಂಸ್ಕಾರಿಕ, ವೈದಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯವಾಗಿ ಬಲಾಡ್ಯಗೊಳಿಸುವ ಹಾಗೂ ಮುಂಬರುವ ವಿಧಾನ ಸಭಾ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸಮಾಜದ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದೆ ಪ್ರಯುಕ್ತ ಈ ಬೃಹತ್ ಸಮಾವೇಶಕ್ಕೆ ಜಂಗಮ ಬಾಂಧವರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.