ಔರಾದ: ತಾಲ್ಲೂಕಿನ ವಿವಿಧೆಡೆ ಜಾಗೃತಿ ಜಾಥಾ ಮಾಡುವ ಮೂಲಕ ಬಸವಕಲ್ಯಾಣದಲ್ಲಿ ಮಾರ್ಚ್ 4 ಮತ್ತು 5ರಂದು ನಡೆಯುವ ರಾಷ್ಟ್ರೀಯ ಲಿಂಗಾಯತ ಮಹಾಧಿವೇಶನದ ಕುರಿತು ಅರಿವು ಮೂಡಿಸಲಾಯಿತು.
ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಅಧಿವೇಶನದ ಕುರಿತು ಮುಖಂಡ ಬಂಡೆಪ್ಪ ಕಂಟೆ ಜನರಿಗೆ ಮಾಹಿತಿ ನೀಡಿದರು. ಇದೊಂದು ಐತಿಹಾಸಿಕ ಕಾರ್ಯಕ್ರಮ ಲಿಂಗಾಯತ ಸೇರಿ ಎಲ್ಲ ಧರ್ಮದವರು ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘುಳೆ, ಶ್ರಿನಿವಾಸ ಖೂಬಾ, ಶರಣು ಪಾಟೀಲ, ಶರಣಪ್ಪ ಬಿರಾದಾರ, ಡಾ. ಸಂಗಮೇಶ ಬಿರಾದಾರ, ವಿರೇಂದ್ರ ಮಿಸೆ, ಸಂಗು ದ್ಯಾಡೆ, ವಿವೇಕ ನಿರ್ಮಳೆ, ಸತೀಶ ಫುಲಾರಿ, ಶಂಕ್ರೆಪ್ಪ ಹಾಗೂ ಅನೀಲ ಪಾಟೀಲ ಇದ್ದರು.