ಔರಾದ: ಏಕತಾ ಫೌಂಡೇಶನ್ ನ ಅಧ್ಯಕ್ಷ ರವೀಂದ್ರಸ್ವಾಮಿ ಔರಾದ್ ತಾಲೂಕಿನ ಗೌಡಗಾಂವ ಗ್ರಾಮಕ್ಕೆ ಭೇಟಿ ಕೊಟ್ಟರು. ಈ ವೇಳೆ ಗ್ರಾಮದ ಪ್ರಸಿದ್ಧ ಮಹಾರಾಜರಾದ ಶ್ರೀ ಕರ್ಣ ಮಹಾರಾಜ ಏಕಂಬಾಕರ್‌ರವರ ಆಶೀರ್ವಾದ ಪಡೆದರು.
ಮಹಾರಾಜರು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿಯವರು ಔರಾದ್ ತಾಲೂಕಿನ ‘ಗೌಡಗಾಂವ್’ ಗ್ರಾಮಕ್ಕೆ ಭೇಟಿಕೊಟ್ಟರು. ಈ ವೇಳೆ ಗ್ರಾಮದ ಪ್ರಸಿದ್ಧ ಮಹಾರಾಜರಾದ ‘ಶ್ರೀ ಕರ್ಣ ಮಹಾರಾಜ ಏಕಂಬಾಕರ್’ ರವರ ಆಶೀರ್ವಾದ ಪಡೆದರು. ಮಹಾರಾಜರು, ಶ್ರೀ ರವೀಂದ್ರ ಸ್ವಾಮಿಯವರಿಗೆ ಶಾಲನ್ನು ಹೊದಿಸಿ, ಸನ್ಮಾನ ಮಾಡಿ ಮುಂದಿನ ದಿನಗಳಲ್ಲಿ ಔರಾದ್ ಹಾಗೂ ಕಮಲನಗರ ತಾಲೂಕಿನ ಮಹಾಜನತೆಯ ಸೇವೆ ಸಲ್ಲಿಸುವ ಅವಕಾಶ ಬಂದೊದಗಲಿ ಎಂದು ಆಶೀರ್ವದಿಸಿದರು.
ಈ ಕುರಿತು ಮಾತನಾಡಿದ ಅಭ್ಯರ್ಥಿ ರವೀಂದ್ರ ಸ್ವಾಮಿ ನನಗೆ ಜನಸೇವೆಯೇ ಮುಖ್ಯ. ನನ್ನ ಔರಾದ ಕ್ಷೇತ್ರದ ಜನತೆ ಸುಖವಾಗಿರಬೇಕೆಂದು ನನ್ನ ಹೆಬ್ಬಯಕೆ. ಎಲ್ಲರ ಆಶೀರ್ವಾದ ನನಗೆ ಅವಶ್ಯಕತೆ ಇದೆ ಎಂದರು.
ಈ ವೇಳೆ ಪ್ರಮುಖರಾದ ಭರತ ಪಾಟೀಲ, ಗೋವಿಂದರಾವ್ ಲೋನೆ, ನಾಗನಾಥ ಜ್ಞಾನೋಭ ಹಾಗೂ ಮುಂತಾದ ಹಿರಿಯರು-ಕಿರಿಯರು ಉಪಸ್ಥಿತರಿದ್ದು, ರವೀಂದ್ರ ಸ್ವಾಮಿಯವರಿಗೆ ಸಾಥ್ ನೀಡಿದರು.