ಔರಾದ: ಕಾಯಕದಲ್ಲಿ ಮೇಲು ಕೀಳು, ತಾರತಮ್ಯ, ಜಾತೀಯತೆ, ಮೂಢನಂಬಿಕೆ, ಸಾಮಾಜಿಕ ಅಸಮಾನತೆ ನಿವಾರಿಸಲು ಶರಣ ಮಡಿವಾಳ ಮಾಚಿದೇವರು ಸಮಪಾಲು- ಸಮಬಾಳು ಸಾಮಾಜಿಕ ಕ್ರಾಂತಿ ಕೈಗೊಂಡಿದವರು ಎಂದು ಅನುಭವ ಮಂಟಪ ಗುರುಕುಲ ಶಾಲೆಯ ಸಂಪನ್ಮೂಲ ಶಿಕ್ಷಕ ಮಾರುತಿ ಗಾದಗೆ ಹೇಳಿದರು.
ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಗಣಾಚಾರ ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 12ನೇ ಶತಮಾನದ ಶರಣರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಕೈಯಲ್ಲಿ ಖಡ್ಗ ಹಿಡಿದು ವಚನಗಳನ್ನು ಸಂರಕ್ಷಿಸಿದವರು ಮಡಿವಾಳ ಮಾಚಿದೇವರು ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಮಾಚಿದೇವರು ಕಾಯಕದಲ್ಲಿ ನಿಷ್ಠೆ ಉಳ್ಳವರು ಕಲ್ಯಾಣಕ್ಕೆ ಬಂದವರಿಗೆ ಪರೀಕ್ಷಿಸಿ, ಮಡಿಹಾಸಿ ಸ್ವಾಗತಿಸಿದ ಶರಣರು. ಇಂದಿನ ಮಾನವರು ತಮ್ಮ ನಿಜ ಜೀವನದ ಕಾಯಕ ಸತ್ಯವನ್ನು ಅರಿತು, ನಾಚಿಕೆ ಇಲ್ಲದೆ ಶರಣರಂತೆ ಕಾಯಕದಲ್ಲಿ ತೊಡಗಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿನಿ ಅಂಜಲಿ ಶಿವಕುಮಾರ ಮಾತನಾಡಿದರು. ಈ ಸಂದರ್ಭದಲ್ಲಿ ಸ್ನೇಹಾ ನವನಾಥ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ, ಸುಧಾ ಕೌಟಿಗೆ ಸೇರಿದಂತೆ ಇತರರಿದ್ದರು.