ಔರಾದ: ತಾಲ್ಲೂಕಿನ ನಿಂಗದಳ್ಳಿ ಗ್ರಾಮದ ಬಾಲಕ ಪ್ರಶಾಂತ ರಾಜಪ್ಪ ವಯಸ್ಸು (12) ಸಾವನ್ನಪ್ಪಿದ್ದಾನೆ. ಈ ಬಾಲಕನ ಶವ ಗ್ರಾಮದ ಹೊರ ವಲಯದ ಹೊಲದಲ್ಲಿ ಗುರುವಾರ ಪತ್ತೆಯಾಗಿದೆ.
ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಆಸ್ಪತ್ರೆ ಎದುರು ಭೀಮ ಆರ್ಮಿ ತಾಲ್ಲೂಕು ಅಧ್ಯಕ್ಷ ಗೌತಮ ಮೇತ್ರೆ ಆಗ್ರಹಿಸಿದರು. ಈ ಸಂಬಂಧ ಚಿಂತಾಕಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.