ಔರಾದ್: ತೇಗಂಪುರ ಗ್ರಾಮದ ಮನೆಯೊಂದರಲ್ಲಿ ಶನಿವಾರ ಯಾರೂ ಇಲ್ಲದಿರುವುದನ್ನು ಗಮನಿಸಿ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ.
ಖಾಸಗಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಸಂಜುಕುಮಾರ ಪಾಟೀಲ್ ಮನೆಯಲ್ಲಿ ಕಳ್ಳತನವಾಗಿದೆ. ಅಂಗನವಾಡಿ ಕಾರ್ಯಕರ್ತೆಯಾಗಿರುವ ಅವರ ಪತ್ನಿ ಮಹಾನಂದ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ತೋರಿಸಲು ಖಾಶೆಂಪುರದಲ್ಲಿರುವ ತವರು ಮನೆಗೆ ಹೋಗಿದ್ದರು. ಮನೆ ಖಾಲಿ ಇರುವುದನ್ನು ಗಮನಿಸಿದ ಕಳ್ಳರು ಅಲ್ಮೆರಾ ಬೀಗ ಒಡೆದು ಬೆಳ್ಳಿ, ಬಂಗಾರ ಮತ್ತು ನಗದು ಸೇರಿ ಸುಮಾರು 2,24,800 ರೂ. ವೆಚ್ಚದ ವಸ್ತುಗಳನ್ನು ದೋಚಿದ್ದಾರೆ. ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.