ಔರಾದ್: ನಿರಂತರ ಪರಿಶ್ರಮದ ಫಲದಿಂದಾಗಿ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಸಂತಪುರದ ಸಿದ್ಧರಾಮೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಂಜಲಿ ಶಿವಕುಮಾರ ಕಲಾ ವಿಭಾಗದಲ್ಲಿ 600ಕ್ಕೆ 587 (ಶೇ. 97.83) ಅಂಕ ಪಡೆದು ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.
ಗುಡಪಳ್ಳಿ ಗ್ರಾಮದ ಅಂಜಲಿ ಪಾಲಕರು ಬಡ ಕೃಷಿಕರು. ಹಲವು ಸವಾಲುಗಳ ಮಧ್ಯೆ ಅಧ್ಯಯನದಲ್ಲಿ ತೊಡಗಿ ಉತ್ತಮ ಫಲಿತಾಂಶ ಪಡೆದು ಗಮನ ಸೆಳೆದಿದ್ದಾಳೆ. ಪ್ರಥಮ ಭಾಷೆ ಕನ್ನಡದಲ್ಲಿ 99, ಹಿಂದಿ 96, ಇತಿಹಾಸ 97, ಅರ್ಥಶಾಸ್ತ್ರ 98, ಸಮಾಜಶಾಸ್ತ್ರ 99, ರಾಜ್ಯಶಾಸ್ತ್ರ 98 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಚಾರ್ಯ ನವೀಲಕುಮಾರ ಉತ್ಕಾರ್ ತಿಳಿಸಿದ್ದಾರೆ.