ಔರಾದ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಲಾವಣ್ಯಗೆ ಔರಾದ ಪಟ್ಟಣದ ನ್ಯೂ ಪತ್ರಿ ಸ್ವಾಮಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸುಭಾಸ್ ಚಂದ್ರ ಭೋಸ್ ಯುವಕ ಸಂಘದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ವೇಳೆ ಡಾ. ಪ್ರಮೋದೀನಿ ಮಾತನಾಡಿ, ಲಾವಣ್ಯಳ ಈ ಸಾಧನೆ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು. ಮುಖಂಡ ಶರಣಪ್ಪ ಪಾಟೀಲ ಮಾತನಾಡಿ, ಹಿಂದುಳಿದ ಹಣೆ ಪಟ್ಟಿ ಇರುವ ನಮ್ಮ ತಾಲೂಕಿನಲ್ಲಿ ಈ ಕಾಲೇಜನ ಉತ್ತಮ ಫಲಿತಾಂಶದಿಂದ ತಾಲೂಕಿನ ಕೀರ್ತಿ ಹೆಚ್ಚಿಸಿದೆ ಎಂದರು.
ಸಂಘದ ಅಧ್ಯಕ್ಷ ರತ್ನದೀಪ್ ಕಸ್ತೂರೆ ಮಾತನಾಡಿ, ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ನರ್ಸಿಂಗ್ ಆಫೀಸರ್ ಲತಿಫಾ, ವಿವೇಕ ನಿರ್ಮಳೆ, ಬಬ್ದು ಪಾಟೀಲ, ಲಕ್ಷ್ಮಿಕಾಂತ ಕಳಸೆ, ಕಾಲೇಜು ಪ್ರಾಂಶುಪಾಲರಾದ ಅಕಿಲ್, ಉಪನ್ಯಾಸಕರಾದ ಅನಿಲ್ ಉಪಸ್ಥಿತರಿದ್ದರು.