ಔರಾದ: ಕಲಿಕೆ ಎನ್ನುವುದು ಮಗುವಿನಲ್ಲಿ ಅಡಗಿರುವ ಶಕ್ತಿಯನ್ನು ಜಾಗೃತಿಗೊಳಿಸುವುದಾಗಿದೆ ಆ ಶಕ್ತಿಯನ್ನು ಹೊರಹೊಮ್ಮುವಂತೆ ಮಾಡುವ ಸಾಮರ್ಥ್ಯ ಶಿಕ್ಷಕನಿಗಿದೆ ಎಂದು ಶಿಕ್ಷಕ ಪ್ರಕಾಶ್ ದೇಶಮುಖ ನುಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಔರಾದ, ಸಮೂಹ ಸಂಪನ್ಮೂಲ ಕೇಂದ್ರ ಮುಧೋಳ.ಬಿ ಹಾಗೂ ಸರ್ಕಾರಿ ಪ್ರೌಢಶಾಲೆ ಮುಧೋಳ. ಬಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಿವಶಂಕರ ಟೋಕರೆ ಮಾತನಾಡಿ, ತಾಲೂಕಿನಲ್ಲಿ ಸುಸಜ್ಜಿತವಾದ ಎಲ್ಲಾ ಸೌಲಭ್ಯವುಳ್ಳ ಉನ್ನತ ಮಟ್ಟದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರವಿದ್ದು, ಲ್ಯಾಬ್ ಸೇರಿದಂತೆ ತರಬೇತಿಗೆ ಬೇಕಾಗಿರುವ ಪ್ರತಿಯೊಂದು ಸೌಲಭ್ಯ ಹೊಂದಿದ್ದು, ವಿದ್ಯಾರ್ಥಿಯು ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆದಲ್ಲಿ ತರಬೇತಿ ಅವಧಿ ನಂತರ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಾಯಕವಾಗಲಿದೆ. ಈಗಾಗಲೇ ತಾಲೂಕಿನ ನೂರಾರು ವಿದ್ಯಾರ್ಥಿಗಳು ತರಬೇತಿ ಪಡೆದು ಮಹಾನಗರಗಳಲ್ಲಿ ಒಳ್ಳೆಯ ಕಂಪನಿಗಳಲ್ಲಿ ಹೆಚ್ಚಿನ ಸಂಬಳದೊಂದಿಗೆ ಉದ್ಯೋಗ ಮಾಡುತ್ತಿದ್ದಾರೆ ನಿಮ್ಮ ಮಕ್ಳನ್ನು ನಮ್ಮ ಜೋಳಿಗೆಗೆ ಹಾಕಿ ನಾವು ಆ ಮಕ್ಕಳ ಭವಿಷ್ಯ ನಿರ್ಮಾಣ ಮಾಡುತ್ತೇವೆ ಎಂದು ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಗುರು ಸಿಂಗೆ ಸೂರ್ಯಕಾಂತ್ ಮಾತನಾಡಿ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಿತ್ತು. ಅದನ್ನು ಅರಿತ ಸರ್ಕಾರ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರ ಅಡಿಯಲ್ಲಿ ಇಂದು ನಾವು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಆಚರಿಸುತ್ತಿದ್ದೇವೆ. ನಮ್ಮ ಕ್ಲಸ್ಟರ್ ನಲ್ಲಿರುವ ಸುಮಾರು 19 ಶಾಲೆಗಳ ಮಕ್ಕಳು ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದಾರೆ. ಮಕ್ಕಳು ಪೇಪರ್ ನಿಂದ, ಧಾನ್ಯಗಳಿಂದ, ಸುತ್ತಮುತ್ತ ಸಿಗುವ ವಿವಿಧ ಪರಿಕರಗಳಿಂದ ವಿಭಿನ್ನ ಕಲಿಕಾ ಸಾಮಗ್ರಿಗಳನ್ನು ತಯಾರಿಸಿದ್ದು ಕಲಿಕಾ ಹಬ್ಬಕ್ಕೆ ಮೆರಗು ತಂದಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗಜಾನಂದ, ಕಲಿಕಾ ಹಬ್ಬದ ಜಿಲ್ಲಾ ನೋಡಲ್ ಅಧಿಕಾರಿ ಗೋಪಾಲ್ ರಾವ್ ಪಡುವಲ್ಕರ್, ಬಲ ಭೀಮ್ ಕುಲಕರ್ಣಿ, ಸಂಜಯ ಮೈತ್ರಿ, ಈಶ್ವರ ಕ್ಯಾದಿ, ಶಿಕ್ಷಣ ಸಂಯೋಜಕ ಶಶಿಕುಮಾರ ಬಿಡುವೆ, ಬಸವರಾಜ ಒಂಟೆ, ಸುನಿಲ ಬಿಚ್ಕುಂದಿ, ಡಾ. ಶಾಲಿವಾನ್ ಉದ್ಗಿರೆ ಸೇರಿದಂತೆ ಇತರರು ಹಾಜರಿದ್ದರು.