News Karnataka
ಶಿಕ್ಷಣ

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸಬೇಕು

The spirit of service should be inculcated in the students.
Photo Credit : Ravi Mathapati

ಔರಾದ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿ ಸಮಯ ಪ್ರಜ್ಞೆ ಮೂಡಿಸುವತ್ತ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಬಸವ ಗುರುಕುಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಅಗತ್ಯ ಎಂದು ಹೇಳಿದರು. ಬಸವ ಗುರುಕುಲ ಪಬ್ಲಿಕ್ ಸ್ಕೂಲ್ ಕಳೆದ 9 ತಿಂಗಳ ಹಿಂದೆ ಆರಂಭವಾಗಿದ್ದು, ಪಾಲಕರು ಶಿಕ್ಷಣಕ್ಕೆ ಮೆಚ್ಚಿಕೊಂಡಿದ್ದಾರೆ. ಶಾಲೆಯ ಅಭಿವೃದ್ಧಿಗೆ ಎಲ್ಲರೂ ಸೇರಿ ಶ್ರಮಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾಲ್ಕಿಯ ಮಹಾಲಿಂಗ ದೇವರು ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿಯ ಕುರಿತು ಮಾರ್ಗದರ್ಶನದ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಅತ್ಯಂತ ಅವಶ್ಯವಾಗಿದೆ ಎಂದರು. ಎರಡನೇ ತರಗತಿಯ ಮಕ್ಕಳು ಮನುಷ್ಯನ ಅಂಗಾಗ ತೋರಿಸಿ ಅದರ ಕಾರ್ಯ ವಿಧಾನದ ಬಗ್ಗೆ ವಿವರಿಸಿದರು. ಅದರಂತೆ ಸೋಲಾ‌ರ್ ತೋರಿಸಿ ಅದರ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಈ ಪ್ರಯೋಗಶೀಲದ ಮನೋಭಾವ ಬೆಳೆಯಲು ಶಾಲೆಯ ಮುಖ್ಯಗುರು ಸನ್ವರ್ ಸುಲ್ತಾನಾ ಕಾರಣರಾಗಿದ್ದಾರೆ.

ಪ್ರಮುಖರಾದ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ. ಸಂಜುಕುಮಾರ ಜುಮ್ಮಾ ಪತ್ರಕರ್ತರಾದ ಶರಣಪ್ಪ ಚಿಟಿಮೆ, ಶಿವಾನಂದ ಮೊಕ್ತದಾರ, ಶ್ರೀನಿವಾಸ ಖೂಬಾ, ಅಶೋಕ ಅಲಮಾಜೆ, ಗುರುರಾಜ, ಶಿವು ಕಸ್ತೂರೆ, ಶಿವು ಗಿರಣೆ, ಸಚಿನ ಗಿರಣೆ, ಶಿಕ್ಷಕರಾದ ಸುಜಾತಾ ಕೋಟೆ, ಸರಿತಾ ಸೂರ್ಯನ್, ಮಧುಮತಿ, ರೋಹಿನಾ, ಮಂಜುಳಾ, ಶೃತಿ, ವಿಜಯಲಕ್ಷ್ಮಿ, ಶ್ರೀಯಂಕಾ, ಸೀರಿನ್, ಜಹೀರಾ ಬೀ, ಫರೀದಾ ಪರಮೇಶ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *