ಔರಾದ: ಔರಾದ್ ಮಾರ್ಗದ ಲಾಧಾ ಸಮೀಪ ಕಲ್ಲು ಕ್ವಾರಿಯಲ್ಲಿ ಈಜಾಡಲು ಹೋಗಿ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ. ಸಾಲೋಮನ್ ಡೇವಿಡ್ (15) ಮೃತಪಟ್ಟ ಬಾಲಕ ತನ್ನ ಸ್ನೇಹಿತರ ಜೊತೆಗೆ ಈಜಾಡಲು ಹೋಗಿ ಬಾಲಕ ಸಾವನ್ನಪ್ಪಿದ್ದಾನೆ.
ಬೀದರ್ – ಔರಾದ್ ರಸ್ತೆ ಕಾಮಗಾರಿ ನಡೆಸುತ್ತಿರುವ ಆರ್‌ಎಂಎನ್ ಕಂಪೆನಿ ಜಲ್ಲಿ ಕಲ್ಲುಗಳಿಗಾಗಿ ಆಳವಾದ ಕಂದಕ ಕೊರೆದಿದೆ. ಆದರೆ, ನೆಲಸಮಗೊಳಿಸದೇ ಹಾಗೇ ಬಿಟ್ಟಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕ್ವಾರಿ ತುಂಬಿದೆ. ಮೃತನ ತಾಯಿ ಸಂತಪೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪರಿಹಾರ ನೀಡಲು ಆಗ್ರಹಿಸಿದ್ದಾರೆ. ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಆರ್‌ಎಂಎನ್ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಫೂರ ಆಗ್ರಹಿಸಿದ್ದಾರೆ.