ಔರಾದ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಂಸದ ಆರ್. ಧ್ರುವ ನಾರಾಯಣ ಅವರ ನಿಧನಕ್ಕೆ ಇಲ್ಲಿಯ ಕಾಂಗ್ರೆಸ್ ಮುಖಂಡರು ಶ್ರದ್ಧಾಂಜಲಿ ವ್ಯಕ್ತಪಡಿಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ವಿಜಯಕುಮಾರ ಕೌಡಾಳೆ ಮಾತನಾಡಿ, ಧ್ರುವನಾರಾಯಣ ಅವರು ಈ ರಾಜ್ಯ ಕಂಡ ಅಪರೂಪದ ಸರಳ, ಸಜ್ಜನಿಕೆಯ ರಾಜಕಾರಣಿ. ಸದಾ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಇವರ ಅದರ್ಶ ಎಲ್ಲರಿಗೂ ಮಾದರಿ ಎಂದರು.
ಹಿರಿಯ ಮುಖಂಡ ಶಿವರಾಜ ದೇಶಮುಖ ಮಾತನಾಡಿ, ಧ್ರುವ ನಾರಾಯಣ ಅವರು ರಾಜಕಾರಣದ ಮೌಲ್ಯ ಕಾಪಾಡಿಕೊಂಡು ಬಂದವರು. ಅವರು ಯುವ ರಾಜಕಾರಣಿಗಳಿಗೆ ಆದರ್ಶವಾಗಬೇಕು ಎಂದರು.
ಯುವ ಮುಖಂಡ ಬಂಟಿ ದರಬಾರೆ ಮಾತನಾಡಿ, ಧ್ರುವ ನಾರಾಯಣ ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ ಆಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.