ಔರಾದ: ಬೀದರ-ಔರಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುಣಮಟ್ಟದಿಂದ ಮಾಡಬೇಕು, ಮುಸ್ತಾಪುರದಲ್ಲಿ ಚರಂಡಿ, ರಸ್ತೆ ವಿಭಜಕ ನಿರ್ಮಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ (ಕೃಷ್ಣಪ್ಪ ಬಣ) ಪದಾಧಿ ಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಬರೆದ ಮನವಿಯನ್ನು ಔರಾದ್ ತಾಲೂಕಿನ ಸಂತಪುರ ನಾಡ ತಹಸೀಲ್ದಾರ ಪ್ರೇಮದಾಸ್ ಬೋರಾಳೆ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಧನರಾಜ್ ಮುಸ್ತಾಪುರೆ, ತುಕಾರಾಮ ಹಸನ್ಮುಖಿ, ಸಮದ್, ಜೈಪ್ರಕಾಶ ಇತರರು ಉಪಸ್ಥಿತರಿದ್ದರು.