ಔರಾದ: ಕರ್ನಾಟಕ ರಾಜ್ಯ ಪ್ರತಿಭಾ ಪುರಸ್ಕಾರ ಮೈಸೂರು (ರಿ) ಅವರಿಂದ ಪ್ರತಿಭಾವಂತ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಕ್ರಿಯಾಶೀಲ ಸಿ. ಆರ್.ಪಿ, ಬಿ. ಆರ್.ಪಿ, ಬಿ.ಆಯಿ.ಇ. ಟಿ ಅವರಿಗೆ ರಾಜ್ಯ ಮಟ್ಟದ ಗುರು ಸೇವಾ ರತ್ನ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ವಡಗಾಂವ ದೇ ವಲಯದ ಸಿ. ಆರ.ಪಿ ರವೀಂದ್ರ ಡಿಗ್ಗಿ ಅವರಿಗೆ ರಾಜ್ಯ ಮಟ್ಟದ ಗುರು ಸೇವಾ ರತ್ನ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಔರಾದ ಮತ್ತು ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿ ಔರಾದ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನವರು ಮತ್ತು ಸರ್ಕಾರಿ ನೌಕರರ ಸಂಘದವರೆಲ್ಲರೂ ಕೂಡಿ ಗುರು ಸೇವಾ ರತ್ನ ಪ್ರಶಸ್ತಿ ಕೊಟ್ಟು ಅವರಿಗೆ ಸನ್ಮಾನಿಸಿದರು.