ಔರಾದ: ಗ್ರಾಮ ಸಂಚಾರದ ವೇಳೆ ಸಚಿವರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಏಕಂಬಾ ಗ್ರಾಮದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಅರುಣ ಬಾಬುರಾವ ಶಿಂಧೆ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದಲ್ಲದೆ ವೈಯಕ್ತಿಕ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರದೀಪ ಪವಾರ್, ಸುಜಿತ್ ರಾಠೋಡ್, ನಾಗಶೆಟ್ಟಿ ಗಾದಗೆ, ಸುರಾ ನಾಯಕ್, ಮಾದಪ್ಪ ಮಿಠಾರೆ, ಬಾಲಾಜಿ ಠಾಕೂರ, ಶರಣಪ್ಪ ಪಂಚಾಕ್ಷರಿ, ಶಿವಾಂಜೆ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.