ಔರಾದ: ಬೀದರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಪೈಪೋಟಿ ಕಂಡು ಬಂದಿದೆ. ಬಿಜೆಪಿಯಿಂದ ಪ್ರಭು ಚವಾಣ್, ಕಾಂಗ್ರೆಸ್‌ನಿಂದ ಡಾ. ಭೀಮಸೇನರಾವ ಸಿಂಧೆ, ಜೆಡಿಎಸ್ ನಿಂದ ಜೈಸಿಂಗ್ ರಾಠೋಡ್ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ತಮ್ಮ ನಾಮಪತ್ರ ದಾಖಲಿಸಿದ್ದಾರೆ.
ವಿಜಯಕುಮಾರ (ಸ್ವತಂತ್ರ), ಡಾ. ಲಕ್ಷ್ಮಣ್ ಸೋರಳಿಕ (ಕಲ್ಯಾಣ ರಾಜ್ಯ ಪ್ರಗತಿ (ಪಕ್ಷ), ಅಂಕುಶ ಬಾಲಪ್ಪ (ಕರ್ನಾಟಕ ರಾಷ್ಟ್ರ ನಮಿಸಿ), ರವೀಂದ್ರ ಸ್ವಾಮಿ (ಸ್ವತಂತ್ರ), ಬಾಬುರಾವ ಅಡಕೆ (ಎಎಪಿ), ಪ್ರಶಾಂತ ಮರೆಪ್ಪ (ಎಎಪಿ), ಅನೀಲ ರಾಠೋಡ್ (ರಾಷ್ಟ್ರೀಯ ಮರಾಠಾ ಪಾರ್ಟಿ), ಡಾ. ಎಂ.ಪಿ.ದಾರಕೇಶ್ವರಯ್ಯ (ಸ್ವತಂತ್ರ), ರಾಹುಲ್ ಬಾಬುರಾವ (ಸಮಾಜವಾದಿ ಜನತಾ ಪಾರ್ಟಿ), ಸಂತೋಷಕುಮಾರ ಮನೋಹರ (ಸ್ವತಂತ್ರ), ಗುಣವಂತೆ ರಾವ (ಬಹುಜನ ಸಮಾಜ ಪಕ್ಷ), ನರಸಿಂಗ ತುಕಾರಾಮ (ಜನಹಿತ ಪಕ್ಷ)ದಿಂದ ನಾಮಪತ್ರ ಸಲ್ಲಿಸಿದ್ದಾರೆ.