ಔರಾದ: ಆಮ್ ಆದ್ಮ ಪಕ್ಷದ ಅಭ್ಯರ್ಥಿಯಾದ ಬಾಬುರಾವ್ ಆಡಕೆ ತಾಲೂಕಿನ ಬಾರ್ಡರ್ ತಾಂಡಾ, ಮಮದಾಪೂರ, ಅಲ್ಲಾಪೂರ, ತೆಗಂಪೂರ, ಯನಗುಂದಾ ಮತ್ತು ಖಾಸೆಂಪೂರ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಬಳಿಕ ಪ್ರತಿ ಮನೆಗಳಿಗೆ ತೆರಳಿ ಹಿರಿಯರು ಹಾಗೂ ತಾಯಂದಿರ ಆಶಿರ್ವಾದ ಪಡೆದು ಮಾತನಾಡಿದ ಅವರು, ನಾವು ಸುಮಾರು 15 ವರ್ಷಗಳಿಂದ ಬರಿ ಮುಂಬೈ ಬೆಂಗಳೂರು ನಿಂದ ಬಂದಂತಹ ವ್ಯಕ್ತಿಗಳಿಗೆ ಆರಿಸಿ ತರುತ್ತಿದ್ದೇವೆ ಇದರ ಪರಿಣಾಮವಾಗಿ ನಮ್ಮ ನಿಮ್ಮೆಲ್ಲರ ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಂತೆ ಉಳಿದಿವೆ ಇದಕ್ಕೆಲ್ಲ ಕಾರಣ ನಾವು ಪತಿಸಲ ಹೊರಗಿನಿಂದ ಬಂದಂತಹ ಹೊಸಮುಖಗಳಿಗೆ ಅವಕಾಶ ನೀಡುತ್ತಿದ್ದೇವೆ. ಈ ಬಾರಿ ನನಗೆ ಅವಕಾಶ ಕೊಡಿ ನಾನು ಸ್ಥಳೀಯ ಅಭ್ಯರ್ಥಿ ನಿಮ್ಮ ಮನೆ ಮಗನಾಗಿ ಬದಲಾವಣೆ ಮಾಡುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಪಕ್ಷದ ಮುಖಂಡರಾದ ಶಾಂತಕುಮಾರ್ ಭಾವಿಕಟ್ಟಿ, ನಿಮ್ಮ ಮನೆ ಮಗನಾದ ಬಾಬುರಾವ್ ಅಡಕೆ ಅವರು ನಮ್ಮ ತಾಲೂಕಿನಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಈ ಬಾರಿ ಅವರಿಗೆ ಒಂದು ಅವಕಾಶವನ್ನು ಕೊಟ್ಟು ನೋಡೋಣಾ ಎಂದು ಹೇಳಿದರು.
ಬಾರ್ಡರ್ ತಾಂಡಾದಲ್ಲಿ ಆಮ್ ಆದ್ಮ ಪಕ್ಷಕ್ಕೆ ಭವ್ಯ ಮೆರವಣಿಗೆಯಿಂದ ಸ್ವಾಗತಿಸಿ ವಿಶೇಷ ಬೆಂಬಲವನ್ನು ಸೂಚಿಸಿದರು. ಈ ಸಂದರ್ಭದಲ್ಲಿ ಪ್ರಶಾಂತ ಅಡಕೆ, ವಿಶ್ವನಾಥ ಹಾದಿಮನೆ, ರಮೇಶ್ ವಡಗಾಂವ, ಸಂದೀಪ್ ಪಾಟಿಲ್, ಆದಿತ್ಯ ಶಿಂಧೆ, ಅಭಿಷೇಕ ಮಾನಕಾರ ಮತ್ತು ಇಮನವೆಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.