ಔರಾದ: ಬಿಜೆಪಿಯನ್ನು ಇನ್ನಷ್ಟು ಸದೃಢಗೊಳಿಸಲು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಗೆಲುವು ಸಾಧಿಸುವುದಕ್ಕಾಗಿ ತಾಲೂಕಿನಾದ್ಯಂತ ಬೂತ್ ವಿಜಯ ಅಭಿಯಾನ ಆರಂಭಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.
ರಾಜ್ಯಾದ್ಯಂತ ಜನವರಿ 12 ರವರೆಗೆ ಬೂತ್ ವಿಜಯ ಅಭಿಯಾನ ಹಮ್ಮಿಕೊಂಡ ಹಿನ್ನಲೆಯಲ್ಲಿ ಇಂದು ಔರಾದ ತಾಲೂಕಿನ ಬೇಲೂರ್ ಎನ್ ಗ್ರಾಮದಲ್ಲಿ ಬೂತ್ ಸಂಖ್ಯೆ 127 ರಾಮಶೆಟ್ಟಿ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ್ ಅಧ್ಯಕ್ಷ ರಾಮಶೆಟ್ಟಿ ಪನ್ನಳೆ, ವಿಜಯಕುಮಾರ ಕುಮಾರ ಪಾಟೀಲ್ ಗಾದಗೆ, ಪ್ರಧಾನ ಕಾರ್ಯದರ್ಶಿ ಖಂಡೋಬ ಕಂಟೆ, ಕಾರ್ಯದರ್ಶಿ ಬಾಲಾಜಿ ಠಾಕೂರ್, ನಾಗಶೆಟ್ಟಿ ಗಾದಗೆ, ಪ್ರಕಾಶ್ ಜಿರ್ಗೆ ಸೇರಿದಂತೆ ಬಿಜೆಪಿ ಮಂಡಳ ಅಧ್ಯಕ್ಷರುಹಾಗೂ ಕಾರ್ಯಕರ್ತರು ಹಾಜರಿದ್ದರು.