ಔರಾದ: ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಆಗ್ರಹಿಸಿದರು. ಔರಾದ ಪಟ್ಟಣದ ಸ್ಥಳೀಯ ಆಕಾಂಕ್ಷಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಬಂಟಿ ದರ್ಬಾರೆ, ಅಭ್ಯರ್ಥಿ ವಿಚಾರದಲ್ಲಿ ಹಲವು ಗೊಂದಲ ಸೃಷ್ಟಿಯಾಗುವ ಮೊದಲೇ ವರಿಷ್ಠರು ನಿರ್ಧಾರ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.
ಈ ಹಿಂದೆ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಮೂರು ಚುನಾವಣೆಯಲ್ಲಿ ಪರಾಭವಗೊಂಡಿದ್ದೇವೆ. ಹಣಬಲವೊಂದನ್ನೇ ನೋಡಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿರುವುದು ಮತ್ತು ಕೆಲವರು ಮುಖಂಡರನ್ನು ಓಲೈಸಿ ಗೊಂದಲ ಸೃಷ್ಟಿಸುತ್ತಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಕ್ಷೇತ್ರದ ಮುಖಂಡರ, ಸಮಸ್ಯೆಗಳ ಮತ್ತು ಗ್ರಾಮಗಳ ಪರಿಚಯವಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು’ ಎಂದರು.
ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರ ಶಿವರಾಜ್ ದೇಶಮುಖ ಮಾತನಾಡಿ, ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯ ಇಲ್ಲಾ ಅಂದರೆ ಔರಾದ್ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ಹುಡುಕಿದರು. ಸಿಗೋದಿಲ್ಲ ಅಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಎಲ್ಲಾ ಸ್ಥಳೀಯ ಆಕಾಂಕ್ಷಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಸ್ಥಳೀಯ ಆಕಾಂಕ್ಷಿಗಳಾದ ಬಂಟಿ ದರ್ಬಾರೆ (ಇಮಾನುವೆಲ್), ಕೆ.ಟಿ.ವಿಶ್ವನಾಥ್, ರಾಮಣ್ಣ ವಡೆಯರ್, ವಿಶ್ವನಾಥ ದೀನೆ, ಶಿವಮೂರ್ತಿ ಸುಭಾನೆ ಇವರಲ್ಲಿ ಯಾರಿಗಾದರೂ ಟಿಕೆಟ್ ನೀಡಿದರು ಗೆಲುವು ಸುಲಭ. ಹೊರಗಿನವರಿಗೆ ನೀಡಿದರೆ ಕೆಲಸ ಮಾಡಲು ಉತ್ಸಾಹ ಇಲ್ಲದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.