ಔರಾದ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಹಗಲಿರುಳು ದುಡಿಯಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಶಂಕರ ರಾವ್ ದೊಡ್ಡಿ ಹೇಳಿದರು.
ತಾಲೂಕಿನ ಚಟನಾಳ, ಜೀರ್ಗಾ, ಮುಸ್ತಾಪುರ, ಗ್ರಾಮಗಳಿಗೆ ಭೇಟಿ ನೀಡಿದ ಅವರು, ವಿಧಾನಸಭೆಯ ಚುನಾವಣೆಯಲ್ಲಿ ನಾನು ಕೂಡಾ ಆಕಾಂಕ್ಷಿ ಆಗಿದ್ದೇನೆ. ಕಾಂಗ್ರೆಸ್‌ನಿಂದ ಯಾರೇ ಕಣಕ್ಕಿಳಿದರೂ ಸಂಘಟಿತರಾಗಿ ಗೆಲುವಿಗಾಗಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಸಯ್ಯಸ್ವಾಮಿ ಶರಣಪ್ಪ ಬಂಬಳಗಿ, ಶರಣಪ್ಪ ಕಾರಮಂಗಿ, ಅಭಿಮನ್ಯು ಜಿರ್ಗೆ, ಶರಣಪ್ಪ ಜೀರ್ಗ, ಪಂಡಿತ್ ರಾವ್ ಕತ್ತೆ, ಮಹಾದೇವ ಮಸೂದೆ, ಬಾಲಾಜಿ ಪಾಟೀಲ್, ರಾಜಕುಮಾರ್ ಪಾಟೀಲ್, ದೇವದಾಸ್ ಪಾಟೀಲ್ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರು ಉಪಸಿತರಿದ್ದರು.