ಔರಾದ: ಚುನಾವಣಾ ಪ್ರಚಾರಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ನಾರಾಯಣ ರಾಣೆ ಬುಧವಾರ ಔರಾದ(ಬಿ) ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿ ಸಚಿವ ಪ್ರಭು.ಬಿ ಚವ್ಹಾಣ ಪರವಾಗಿ ಭರ್ಜರಿ ಮತಯಾಚನೆ ಮಾಡಿದರು.
ಸಂತಪೂರ, ಹೆಡಗಾಪೂರ, ರಕ್ಷ್ಯಾಳ, ಠಾಣಾಕುಶನೂರ ಸೇರಿದಂತೆ ವಿವಿಧೆಡೆ ಸಂಚರಿಸಿ ಮಹನಿಯರ ಪ್ರತಿಮೆಗಳಿಗೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ಗ್ರಾಮಗಳಲ್ಲಿರುವ ದೇವಸ್ಥಾನಗಳು ಮತ್ತು ಧಾರ್ಮಿಕ ಗುರುಗಳನ್ನು ಭೇಟಿಯಾಗಿ ದರ್ಶನ ಪಡೆದರು. ಹೆಡಗಾಪೂರ ಗ್ರಾಮದಲ್ಲಿ ಶಂಭುಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ಪೂಜ್ಯ ಶಿವಲಿಂಗ ಶಿವಾಚಾರ್ಯರು ಹಾಗೂ ರಕ್ಷ್ಯಾಳ(ಕೆ) ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಆಶ್ರಮಕ್ಕೆ ತೆರಳಿ ಪೂಜ್ಯ ಮುರುಳಿಧರ ಮಹಾರಾಜರ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿತು.
ಸಂತಪೂರ, ಠಾಣಾಕುಶನೂರ, ಮುಧೋಳ ಹಾಗೂ ದಾಬಕಾನನಲ್ಲಿ ಬಸವೇಶ್ವರರು, ಶಿವಾಜಿ ಮಹಾರಾಜರು, ಡಾ.ಬಿ.ಆರ್ ಅಂಬೇಡ್ಕರ್, ಬೊಮ್ಮಗೊಂಡೇಶ್ವರ ಸೇರಿದಂತೆ ವಿವಿಧ ಮಹನೀಯರ ಪ್ರತಿಮೆಗಳಿಗೆ ಪೂಜೆ ಹಾಗೂ ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಸತೀಷ ಪಾಟೀಲ, ಶಿವಾಜಿ ಪಾಟೀಲ ಮುಂಗನಾಳ, ಕಿರಣ ಪಾಟೀಲ, ವಿಠಲರೆಡ್ಡಿ ಬುರುಡೆ, ವಿಲಾಸ ಗುರೂಜಿ, ರಾಜೇಶ ಶಳ್ಕೆ, ಬಾಲಾಜಿ ನಾಯಕ್, ಉಮೇಶ ನಾಯಕ್, ಬಾಬುರಾವ್ ಜಾಧವ ಸೇರಿದಂತೆ ಇತರರು ಇದ್ದರು.