ಔರಾದ್: ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಜನರಿಗೆ ಮುಟ್ಟಿಸಲು ಬದ್ಧ ಎಂದು ಪಕ್ಷದ ಮುಖಂಡ ವಿಜಯಕುಮಾರ ಕೌಡಾಳೆ ಹೇಳಿದರು.
ತಾಲೂಕಿನ ಬೋರಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಜನರಿಗೆ ತಿಳಿ ಹೇಳಿದರು. ಪಕ್ಷ ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ, ಗೃಹಜ್ಯೋತಿ ಗ್ಯಾರಂಟಿ ಕಾರ್ಡ್‌ನಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ಕೊಡಲಾಗುವುದು ಎಂದು ತಿಳಿಸಿದರು.
ಯುವ ಮುಖಂಡ ಬಂಟಿ ದರಬಾರೆ ಮಾತನಾಡಿ, ಬಿಜೆಪಿಯಂತೆ ಕಾಂಗ್ರೆಸ್ ಎಂದೂ ಸುಳ್ಳು ಭರಸೆ ಕೊಡುವುದಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿನ ಎಲ್ಲ ಜನಪರ ಯೋಜನೆ ಮತ್ತೆ ಜಾರಿಗೆ ಬರಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಬೋರಾಳೆ, ರಾಜು, ಜಗನ್ನಾಥ ಮಚಕುರೆ, ಸಂಜು, ಬಳಿರಾಮ ಮಚಕುರೆ, ಧನರಾಜ ಬೋರಾಳ ಸೇರಿದಂತೆ ಇತರರಿದ್ದರು.