ಔರಾದ: ಮಾಜಿ ಜಿ.ಪಂ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಜೈ ಸಿಂಗ್ ರಾಠೋಡ್ ಅವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆತಾಲೂಕ ಅಧ್ಯಕ್ಷ ತಾನಾಜಿ ತೊರ್ನೆಕರ್ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದಾರೆ.
ಔರಾದ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಜೆಡಿಎಸ್ ಪಕ್ಷಕ್ಕೆ ಬರ ಮಾಡಿಕೊಂಡರು. ನಂತರ ಜೈ ಸಿಂಗ್ ರಾಠೋಡ್ ಮಾತನಾಡಿ, ಜೆಡಿಎಸ್ ಪಕ್ಷವು ರೈತರ ಪರವಾದ ಪಕ್ಷವಾಗಿದೆ. ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಮುಂಬರುವ ವಿಧಾನಸಭಾ ಎಲೆಕ್ಷನ್‌ನಲ್ಲಿ ಪಕ್ಷ ಟೀಕೆಟ್ ನೀಡಿದರೆ ಔರಾದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದರು.
ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ ಹಾಗೂ ಶಾಸಕ ಬಂಡೆಪ್ಪ ಅವರನ್ನು ಏಪ್ರಿಲ್ ಮೊದಲ ವಾರದಲ್ಲಿ ಕರೆಸಿ ಔರಾದ ಪಟ್ಟಣದಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮ ಮಾಡುತ್ತೇನೆ ಎಂದರು. ಈ ವೇಳೆ ಮಾಣಿಕ್ ಚೌಹಾಣ್, ರಾಜು ಪಾಟೀಲ್, ಬಾಬು ಸಿಂಗ್ ಹಜಾರೆ, ಎಕನಾಥ್, ಶಿವಾನಂದ ಜಾಬಾ, ಬಾಬಶೆಟ್ಟಿ, ರಾಜು ಪಾಟೀಲ ವಲ್ಲೆಪುರ್, ಸಾಯಿನಾಥ ಕಾಂಬಳೆ, ಬಾಬು ಸಿಂಗ್ ಹಜಾರೆ, ದ್ಯಾನೇಶ್ವರ ಮುದಾಳೆ, ರಾಮು ಚವ್ಹಾಣ, ಬಾಲಾಜಿ ರಾಠೋಡ ಏಕಾಂಬಾ, ಕಿಶನ್ ಪಾಟೀಲ, ದಿನೇಶ ರಾಠೋಡ, ಶಿವರಾಜ್ ದೇಶಮುಖ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.