ಔರಾದ: ತಾಲೂಕಿನ ಠಾಣಾಕುಶನೂರ, ತೋರಣಾ, ಡೊಣಗಾಂವ .ಎಮ್, ಬೆಳಕುಣಿ (ಬಿ. ಹೆಚ್) ಮುಧೂಳ್ (ಬಿ) ಕೂರೆಕಲ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಮನೆಗೆ ಗೃಹಲಕ್ಷ್ಮಿಕಾರ್ಡ ವಿತರಣೆ ಮಾಡಲಾಯಿತು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬಕ್ಕೆ 2೦೦೦ ರೂಪಾಯಿಗಳು, ಹಾಗೂ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ 1೦ ಕೆಜಿ ಅಕ್ಕಿ ನೀಡುವ ಹಾಗೂ 2೦೦ ಯೂನಿಟ್ ಕರೆಂಟ್ ಬಿಲ್ಲನ್ನು ಉಚಿತವಾಗಿ ನೀಡುವ ಭರವಸೆಯ ಗ್ಯಾರಂಟಿ ಕಾರ್ಡ್‌ಗಳಾಗಿದ್ದು ಈ ಕಾರ್ಡ್‌ಗಳನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರು ಹಾಗೂ ಔರಾದ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ್ ಟಿಕೆಟ್ ಆಕಾಂಕ್ಷಿಗಳಾದ ಲಕ್ಷ್ಮಣರಾವ್ ಬುಳ್ಳಾ, ಔರಾದ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಆನಂದ ಚವ್ಹಾಣ, ದೀಪಕ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.