ಔರಾದ: ಪಟ್ಟಣದ ವಾರ್ಡ್ ನಂ. 13ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಡೋರ್ ಟು ಡೋರ್ ಪಟ್ಟಣ ಪಂಚಾಯತ ಸದಸ್ಯರಾದ ಬಂಟಿ ದರ್ಬಾರೆ ನೇತೃತ್ವದಲ್ಲಿ ವಿತರಿಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರ್ಬಾರೆ ಮಾತನಾಡಿ, ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಹಗರಣಗಳಲ್ಲೇ ಕಾಲಾಹರಣ ಮಾಡುತ್ತಿದೆ. ಆದರೆ ಇದನ್ನು ನೋಡಿಯೂ ಸುಮ್ಮನಿರದ ಕಾಂಗ್ರೆಸ್, ಅಧಿಕಾರಕ್ಕೆ ಬಂದಾಗ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಮಹಿಳೆಗೆ 2000 ರೂ, ;10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಪಕ್ಷ ಘೋಷಿಸಿದೆ. ಆದ್ದರಿಂದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಲಕ್ಕವೀರ ಸಿಂಗ್ ಹಾಗೂ ಗುರದೀಪ್ ಸಿಂಗ್ ಮತ್ತು ಯುವ ಕಾಂಗ್ರೆಸ್ ತಾಲೂಕ ಅಧ್ಯಕ್ಷರಾದ ದತ್ತಾತ್ರಿ ಬಾಪೋರೆ. NSUI ತಾಲೂಕ ಅಧ್ಯಕ್ಷ ಚಂದು ಡಿ. ಕೆ. ಪ್ರಶಾಂತ ದರಬಾರೆ, ಕಾರ್ತಿಕ್ ರಜಪೂತ, ರಶೀದ್ ಸಾಬ್ ದೇವಿದಾಸ ದೇವಕತೆ ಮತ್ತು ಯುವ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ’ ಕಾರ್ಡ್ ವಿತರಿಸಿದರು.