ಔರಾದ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಪ್ರತಿನಿಧಿ ಆಯ್ಕೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎ೦ದು ನೂತನವಾಗಿ ಆಗಮಿಸಿದ ತಹಸೀಲ್ದಾರ ನಾಗರಾಜ ಕೆ. ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.
ತಾಲೂಕಿನ ಖತಗಾಂವ ಗ್ರಾಮದ ಬಸವೇಶ್ವರ ವೃತ್ತದ ಮುಂಭಾಗದಲ್ಲಿ ತಾಲೂಕು ಆಡಳಿತದಿಂದ ನಡೆದ ವಿವಿ ಪ್ಯಾಡ್ ಮತ್ತು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಔರಾದ ವಿಧಾನಸಭಾ ಮತಕ್ಷೇತ್ರದ ಅಧಿನದಲ್ಲಿ ಬರುವ ಠಾಣಾಕುಶನೂರ, ದಾಬಕಾ ಮತ್ತು ಕಮಲನಗರ ವಲಯದ ಎಲ್ಲಾ ನಾಡ ತಹಶೀಲ್ದಾರರು ಕಂದಾಯ ನಿರೀಕ್ಷಕರು, ಗ್ರಾಮ ಲೇಕ್ಕಿಗರು, ಚುನಾವಣಾ ಅಧಿಕಾರಿಗಳು ಹಾಗೂ ಅಧಿನದಲ್ಲಿ ಬರುವಂತಹ ಕಚೇರಿಗಳ ಅಧಿಕಾರಿಗಳು ಸಾರ್ವಜನಿಕರಿಗೆ ಚುನಾವಣಾ ಮತಯಂತ್ರ (ಇವಿಎಂ) ಬಗ್ಗೆ ತಿಳುವಳಿಕೆ ಮೂಢಿಸಬೇಕು ಎಂದು ಹೇಳಿದರು.