ಔರಾದ: ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಶಾಸಕ ಈಶ್ವರ್ ಖಂಡ್ರೆ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈ ಕಮಾಂಡ್ ಗೆ ಒತ್ತಾಯಿಸುವ ಸಂಬಂಧ ಕರೆದ ಸಭೆಯಲ್ಲಿ ಮಾರಾಮಾರಿಯಾದ ಘಟನೆ ಜರುಗಿದೆ.
ಔರಾದ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜಕುಮಾರ್ ಹಲಬರ್ಗೆ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷ ಆನಂದ ಚೌಹಾಣ್ ರಿಂದಲೇ ಔರಾದ ವಿಧಾನಸಭೆಯಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿರುವ ಘಟನೆ ಜರುಗಿದೆ. ಕಾರ್ಯಕರ್ತರು ಕುರ್ಚಿಗಳನ್ನು ಒಬ್ಬರಮೇಲೊಬ್ಬರು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಬ್ಬರೂ ಅಧ್ಯಕ್ಷರಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ ಎಂದು ಮುಖಂಡ ಶರಣು ಪಾಟೀಲ್ ಆಕ್ರೋಶ ಹೊರಹಕಿದ್ದಾರೆ. ಚುನಾವಣೆ ದಿನವೇ ಇಬ್ಬರೂ ಅಧ್ಯಕ್ಷರು ನಾಪತ್ತೆಯಾಗಿದ್ದಾರೆ ಎಂದು ದೂರಿದ್ದಾರೆ. ಈ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.