ಔರಾದ: ಬಿಜೆಪಿ ಪಕ್ಷದ ಏಜೆಂಟ್ ತರ ಕೆಲ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಚೇರಿ ಮೇಲಿನ ಬೋರ್ಡ್ ತೆಗೆದಿದ್ದಾರೆ. ಆದ್ದರೆ ಬಿಜೆಪಿ ಕಚೇರಿ ಮೇಲೆ ಬೋರ್ಡ್, ಧ್ವಜ ತೆಗೆದಿಲ್ಲ. ಇದನ್ನು ಪ್ರಶ್ನಿಸಿ ಇಂದು ಚುನಾವಣೆ ಅಧಿಕಾರಿಗಳಾದ ತಹಸಿಲ್ದಾರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.
ದೂರು ಸ್ವೀಕರಿಸಿ ನಂತರ ಮಾತನಾಡಿದ ತಹಶೀಲ್ದಾರ್, ಕೂಡಲೇ ಸಮಸ್ಯೆ ಸರಿಪಡಿಸುತ್ತೇವೆ ಮುಂದೆ ಈ ಥರ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಹಸಿಲ್ದಾರ ತಿಳಿಸಿದರು.