ಔರಾದ: ಕಾಂಗ್ರೆಸ್ ಮುಖಂಡ ಕಮಲನಗರ ಕ್ಷೇತ್ರದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಬಾಬು ಸಿಂಗ್ ಹಜಾರಿ ಅವರು ತಮ್ಮ ಬೆಂಬಲಿಗರೊಂದಿಗೆ ಏಪ್ರಿಲ್ 23ರಂದು ಸಚಿವ ಪ್ರಭು.ಬಿ ಚವ್ಹಾಣ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವೇಳೆ ಪ್ರಮುಖರಾದ ವಾಮನರಾವ ಹುಂಚನಾಳೆ, ದಿಲೀಪ ಹುಂಚನಾಳೆ, ರಮೇಶ ಹುಂಚನಾಳೆ, ಧನಾಜಿ ಹುಂಚನಾಳೆ, ಶುಭಂ ಹುಂಚನಾಳೆ, ಬಾಲಾಜಿ ಹುಂಚನಾಳೆ, ವೀರಾಜಿ ಹುಂಚನಾಳೆ, ಅಶೋಕ ಹಡಪದ, ಜ್ಞಾನು ಸೆರೆ, ರಮೇಶ ಹಡಪದ, ಭರತ ಕದಮ್, ದಿಲೀಪ ಕದಮ್, ರಾಮ ಜಾಧವ, ರಾಜೇಂದ್ರ ಶ್ರೀಮಂಗಲೆ ಸೇರಿದಂತೆ ಬಾಬು ಸಿಂಗ್ ಹಜಾರಿ ಅವರ 50ಕ್ಕೂ ಹೆಚ್ಚು ಜನ ಬೆಂಬಲಿಗರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಸಚಿವರು ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜವನ್ನು ನೀಡುವ ಮೂಲಕ ಆತ್ಮೀಯವಾಗಿ ಬರ ಮಾಡಿಕೊಂಡರು. ಈ ವೇಳೆ ಮಾತನಾಡಿದ ಬಾಬುಸಿಂಗ್ ಹಜಾರಿ ಅವರು, ಸಚಿವರಾದ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಕಮಲನಗರ ತಾಲ್ಲೂಕಿನಲ್ಲಿ ಉತ್ತಮ ಕೆಲಸಗಳಾಗಿವೆ. ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಬೇಕು. ಈ ಉದ್ದೇಶದಿದಲೇ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಸತೀಷ ಪಾಟೀಲ, ಶಿವಾನಂದ ವಡ್ಡೆ, ಶಿವು ಜುಲ್ಫೆ, ರಂಗರಾವ ಜಾಧವ, ನೀಲಕಂಠರಾವ ಕಾಂಬಳೆ, ಬಸವರಾಜ ಪಾಟೀಲ, ಬಾಲಾಜಿ ತೆಲಂಗ, ಸಚಿನ ರಾಠೋಡ, ನಾಗೇಶ ಪತ್ರೆ, ಶಿವರಾಜ ಅಲ್ಮಾಜೆ, ಬಾಲಾಜಿ ತೇಲಂಗ, ಮಲ್ಲಪ್ಪ ದಾದಾ, ವೈಜಿನಾಥ ಗುಡ್ಡಾ, ಸುಭಾಷ ಮಿರ್ಚೆ, ಮಾರುತಿ ಚವ್ಹಾಣ, ಬಂಟಿ ರಾಂಪೂರೆ, ಖಂಡೋಬಾ ಕಂಗಟೆ, ಹಣಮಂತ ಸುರನಾರ ಹಾಗೂ ಇತರರು ಉಪಸ್ಥಿತರಿದ್ದರು.