ಔರಾದ: ಏಕತಾ ಫೌಂಡೇಶನ್‌ನ ಅಧ್ಯಕ್ಷ ರವೀಂದ್ರ ಸ್ವಾಮಿಯವರು ಏಕತಾ ಜನಾಶೀರ್ವಾದ ಯಾತ್ರೆ-2023ರ ಅಂಗವಾಗಿ ‘ಮುಂಗನಾಳ’ ರಕ್ಷಾಳ ಕೆ. ಗ್ರಾಮಕ್ಕೆ ಭೇಟಿ ಕೊಟ್ಟರು.
ಈ ವೇಳೆ ಮತ ಬಾಂಧವರ ಮನೆ-ಮನೆಗೆ ತೆರಳಿ ಅವರಲ್ಲಿ ಆಶೀರ್ವಾದ ಕೋರಿದರು. ಅಲ್ಲದೇ ಜನರನ್ನುದ್ದೇಶಿಸಿ ಮಾತನಾಡಿ, ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿನ ಭ್ರಷ್ಟ ಆಡಳಿತದ ಕುರಿತು ಪ್ರಶ್ನಿಸುವವರು ಯಾರು ಇರಲಿಲ್ಲ. ಆದರೆ ಈಗ ನಾನು ಬಂದಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿದ್ದರೆ ನಾನು ಎಲ್ಲವನ್ನು ಎದುರಿಸಲು ಹಾಗೂ ಒಳ್ಳೆಯ ಆಡಳಿತ ನೀಡಲು ತಯಾರಾಗಿದ್ದೇನೆ ಎಂದರು.
ಅಲ್ಲದೇ ತಾಲ್ಲೂಕಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನನ್ನ ಸೇವೆಯನ್ನು ಕಂಡು ಇಂದಿನ ಶಾಸಕರು ಹತಾಶರಾಗಿದ್ದಾರೆ. ನನ್ನ ತಾಲ್ಲೂಕನ್ನು ಭಯಮುಕ್ತ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ. ನಿಮ್ಮೆಲ್ಲರ ಆಶಿರ್ವಾದ ಬೇಕೆಂದು ತಿಳಿಸಿದರು. ಗ್ರಾಮಗಳ ದರ್ಗಾ, ಮಂದಿರಗಳಿಗೆ ತೆರಳಿ ದರ್ಶನ ಪಡೆದರು. ವಿವಿಧ ಮಹಾತ್ಮರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.