ಔರಾದ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಔರಾದ ಕ್ಷೇತ್ರದ ಟಿಕೆಟ್ ಸಂಬಂಧ ಸ್ಥಳೀಯ ನಿಯೋಗವು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗ ಭೇಟಿ ಮಾಡಿ ಔರಾದ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಚರ್ಚಿಸಿದರು.
ಔರಾದ್ ಕ್ಷೇತ್ರದಿಂದ ಟಿಕೆಟ್ ಕೊಡುವುದಾದರೆ ನಿರಂತರವಾಗಿ ಪಕ್ಷಕ್ಕಾಗಿ ದುಡಿದ ಹಾಗೂ ಪಕ್ಕ ಸ್ಥಳೀಯರಿಗೆ ಟಿಕೆಟ್ ಕೊಡಬೇಕು. ಇಲ್ಲ ಅಂದರೆ ವಿಕಲಚೇತನ ಕೋಟಾದಡಿ ವಿಜಯಕುಮಾರ್ ಕೌಡ್ಯಾಳೆ ಅವರಿಗೆ ಟಿಕೆಟ್ ನೀಡುವಂತೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಬಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವರಾಜ ದೇಶಮುಖ, ಬಂಟಿ ದರ್ಬಾರೆ, ಕೆ.ಟಿ ವಿಶ್ವನಾಥ್, ಲಕ್ಷ್ಮಣ ಬುಳ್ಳ, ಎಬಿಸಿ ಎಲ್ಲಪ್ಪ, ವಿಶ್ವನಾಥ್ ದೀನೆ, ರೋಹಿದಾಸ್ ಗೋಡೆ, ರಾಮಣ್ಣ ಒಡಿಯರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.