ಔರಾದ: ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಸಿಂಧೆ ಹಾಗೂ ಎಂಡಿ ಸಲಾಉದ್ದೀನ್ ಜಂಬಗಿ ಅವರ ನೇತೃತ್ವದಲ್ಲಿ ಹಲವು ಮುಖಂಡರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಹಿರಿಯ ಮುಖಂಡರು ಹಾಗೂ ಜಂಬಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಭಾಷ್ ಚೌದ್ರಿ ಗ್ರಾಮ ಪಂಚಾಯತ್ ಸದಸ್ಯ ಸುನಿಲ್ ರಾಠೋಡ್ ಹಾಗೂ ಸಂಗಡಿಗರನ್ನು ಡಾ. ಭೀಮಸೇನ್ ರಾವ ಶಿಂಧೆ ಅವರು ಕಾಂಗ್ರೆಸ್ ಪಕ್ಷದ ಶಾಲು ಹಾಗೂ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಔರಾದ(ಬಿ) ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಡಾ ಭೀಮಸೇನರಾವ ಶಿಂಧೆ ಅವರು ಬಡವರ, ಕೂಲಿ ಕಾರ್ಮಿಕರ, ದೀನ ದಲಿತರ ಬಗ್ಗೆ ಹೊಂದಿರುವ ಅಪಾರ ಕಾಳಜಿ ಹಾಗೂ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸುತ್ತಾರೆ. ಯಾವುದೇ ಸಮಸ್ಯೆ ಬರಲಿ ಖುದ್ದಾಗಿ ಭೇಟಿ ನೀಡಿ ಅಗತ್ಯ ಪರಿಹಾರ ಸೂಚಿಸುತ್ತಾರೆ. ಇಂಥಹ ಜನನಾಯಕ ನಮಗೆ ಬೇಕು, ಅವರ ಕೆಲಸಗಳಿಂದ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ. ಯಾವಾಗಲೂ ಜನರ ಜೊತೆಗೆ ಇರುವ ಸಿಂಧೆ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಔರಾದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುತ್ತೇವೆ ಎಂದು ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮುಖಂಡರಾದ ಗ್ರಾಮ ಪಂಚಾಯತ್ ಸದಸ್ಯ ದಯಾನಂದ ಜಂಬಗಿ, ತುಕಾರಾಂ ಸಿಂಧೆ, ಪಂಡರಿ ರಾಠೋಡ್, ರಮೇಶ್ ದೇವು ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.