ಔರಾದ: ಜನಸೇವೆ ಮಾಡುವುದೇ ನನ್ನ ಪರಮ ಗುರಿಯಾಗಿದೆ. ನಿಮ್ಮ ತಾಲೂಕಿನ ಮನೆಮಗನಾದ ನನಗೆ ಕ್ಷೇತ್ರದ ಜನತೆ ಒಮ್ಮೆ ಆಶೀರ್ವಾದ ಮಾಡಬೇಕೆಂದು ರವೀಂದ್ರ ಸ್ವಾಮಿ ಮನವಿ ಮಾಡಿದರು.
ಔರಾದ ತಾಲೂಕಿನ ನಾಗೂರಾ ಬಿ. ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿಯೇ ಔರಾದ ತಾಲೂಕು ಅತ್ಯಂತ ಹಿಂದುಳಿದಿದೆ. 15 ವರ್ಷ ಆಡಳಿತ ಮಾಡಿದವರು ತಾಲೂಕಾವನ್ನು ಅಭಿವೃದ್ಧಿ ಮಾಡುವ ಗೋಜಿಗೆ ಹೋಗಲಿಲ್ಲ. ಇನ್ನುಂದೆಯಾದರೂ ತಾಲೂಕಿನ ಜನತೆ ಎಚ್ಚೆತ್ತುಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಕೈಜೋಡಿಸಬೇಕಾಗಿದೆ. ತಾಲೂಕಿನಲ್ಲಿ ಒಂದು ಹೊಸ ವಿಚಾರಗಳೊಂದಿಗೆ ಅಭಿವೃದ್ಧಿಯ ಕುರಿತು ಚರ್ಚಿಸೋಣ, ಐಕ್ಯತೆ ಯಿಂದ ಹೋರಾಟ ಮಾಡೋಣ ಎಂದು ತಿಳಿಸಿದರು.
ಏಪ್ರಿಲ್ 19ರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ತಾಲೂಕಿನ ಜನತೆ ಸಹಸ್ರಾರು ಸಂಖ್ಯೆಯಲ್ಲಿ ಬಂದು ನನ್ನನ್ನು ಆಶೀರ್ವದಿಸಬೇಕು ಜನರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಉಮೇಶ ರೆಡ್ಡಿ, ಉಮಾಕಾಂತ ದೇಶಮುಖ, ಸತೀಶ ದೇಶಮುಖ, ನೀಲಕಂಠ ಮಸ್ಕಲೆ, ಸೋಮನಾಥ ದೇಶಮುಖ, ಸಂಗಪ ಮಸ್ಕಲೆ, ಸಂತೋಷ ಬಿರಾದಾರ, ಸಂಜೀವಕುಮಾರ ಅಷ್ಟೂರೆ, ಅಮೃತ ಮಸ್ಕಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.