ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಜನವರಿ 23ರಂದು ಔರಾದ ತಾಲ್ಲೂಕಿನ ಗಡಿಕುಶನೂರ ಹಾಗೂ ಕಂದಗೂಳ ಗ್ರಾಮದಲ್ಲಿ ಬಿಜೆಪಿ ಔರಾದ(ಬಿ) ಘಟಕದಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿದರು.
ಕಾರ್ಯಕರ್ತರೊಂದಿಗೆ ಗ್ರಾಮದ ರಸ್ತೆಗಳಲ್ಲಿ ಸಂಚರಿಸಿದರು. ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ವಿತರಿಸಿದರು. ಸ್ವತಃ ಕೈಯಲ್ಲಿ ಕುಂಚ ಹಿಡಿದು ಬಿಜೆಪಿಯೇ ಭರವಸೆ ಮತ್ತೊಮ್ಮೆ ಬಿಜೆಪಿ ಎಂಬ ಗೋಡೆ ಬರಹವನ್ನು ಬರೆದು ಗಮನ ಸೆಳೆದರು. ಭಾರತೀಯ ಜನತಾ ಪಕ್ಷದ ವತಿಯಿಂದ ರಾಜ್ಯಾದ್ಯಂತ ಜನವರಿ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ.
ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದಲ್ಲಿ ಸದಸ್ಯರನ್ನು ನೋಂದಾಯಿಸಬೇಕು ಎಂದು ಹೇಳಿದರು.ಎಲ್ಲ ಬೂತಗಳಲ್ಲಿ ಬಿಜೆಪಿಯೇ ಭರವಸೆ, ಮತ್ತೊಮ್ಮೆ ಬಿಜೆಪಿ ಈ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಅಭಿಯಾನದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದು ಕಾರ್ಯಕರ್ತರಲ್ಲಿ ಕೋರಿದರು.
ಮಿಸ್ಡ್ ಕಾಲ್ ಕೊಡುವ ಮೂಲಕ ಪಕ್ಷದ ಸದಸ್ಯತ್ವ ನೋಂದಣಿ ಮಾಡುವ ವಿಶಿಷ್ಟ ಅವಕಾಶವನ್ನು ನೀಡಲಾಗಿದೆ. ಅದರಂತೆ ತಮ್ಮ ಮೊಬೈಲ್ ನಿಂದ 8000090009 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜೆಪಿ ಔರಾದ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಸಂತ ಬಿರಾದಾರ, ರವೀಂದ್ರ ರೆಡ್ಡಿ, ಶಿವು ಪಾಂಚಾಳ, ಪ್ರಕಾಶ ಮೇತ್ರೆ, ಪ್ರಕಾಶ ಜೀರ್ಗೆ, ಲೋಕೇಶ, ನಾಗಶೆಟ್ಟಿ ಗಾದಗೆ, ಪ್ರದೀಪ, ಖಂಡೋಬಾ ಕಂಗಟೆ, ರಮೇಶ ಪಾಟೀಲ, ಯಶವಂತ ಪಾಟೀಲ, ಅನೀಲ ಮುಸ್ತಾಪೂರೆ, ವಿಸ್ತಾರಕ ಪ್ರಕಾಶ ಮಾನೆ ಹಾಗೂ ಇತರರು ಇದ್ದರು