ಔರಾದ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ನಾರಾಯಣ ರಾಣೆ ಅವರು ಬುಧವಾರ ದಾಬಕಾ(ಸಿ) ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸಿ ಸಚಿವ ಪ್ರಭು.ಬಿ ಚವ್ಹಾಣ ಪರವಾಗಿ ಮತಯಾಚನೆ ಮಾಡಿದರು.
ಗ್ರಾಮದ ಭವಾನಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ರ‍್ಯಾಲಿಗೆ ಚಾಲನೆ ನೀಡಲಾಯಿತು. ಶಿವಾಜಿ ವೃತ್ತ, ಹನುಮಾನ ಮಂದಿರ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದ ಬಳಿ ಕೊನೆಗೊಂಡಿತು. ರ‍್ಯಾಲಿಯುದ್ದಕ್ಕೂ ಬಿಜೆಪಿ ಜಯಘೋಷಗಳು ಕೇಳಿಸಿದವು. ಯುವಕರು, ಮಹಿಳೆಯರು ಕುಣಿದು ಕುಪ್ಪಳಿಸಿದರು.
ದಾಬಕಾ ವ್ಯಾಪ್ತಿಯಲ್ಲಿ ಬರುವ ಚಿಕ್ಲಿ, ಗಂಗನಬೀಡ, ಮುರ್ಕಿ, ಚೊಂಡಿಮುಖೇಡ, ಬೋಂತಿ, ಸಾವರಗಾಂವ, ಹೊಕ್ರಾಣಾ, ಬಾವಲಗಾಂವ್, ಮುತಖೇಡ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಹಾಗೂ ಮುಖಂಡರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಅಂಕುಶ ವಾಡೇಕರ್, ಸಂಜೀವ ಮುರ್ಕೆ, ಶುಭಂ ಪಾಟೀಲ, ಭಗವಾನ ಪಾಟೀಲ ಹೊಕ್ರಾಣಾ, ಬಾಳಾ ಪಾಟೀಲ, ಸುನೀಲ ಪಾಟೀಲ, ದಿನೇಶ ಪಾಟೀಲ, ಧನಾಜಿ ಪಾಟೀಲ, ಭರತ ಕದಂ, ಪ್ರವೀಣ ಕಾರಬಾರಿ, ಶಿವಾಜಿರಾವ್ ಕಾಳೆ, ಸಂಜು ದುಬಲಗುಂಡೆ, ಬಿಜೆಪಿಯ ಬೂತ್ ಅಧ್ಯಕ್ಷರು ಒಳಗೊಂಡು ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು