ಔರಾದ : ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅವರು ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿಯಾದರು.
ಶಿವಪುರ, ಮುರ್ಕಿ, ಮುರ್ಕಿವಾಡಿ, ಹಕ್ಯಾಳ, ಖತಗಾಂವ, ಹೊಳಸಮುದ್ರ, ಸಾವಳಿ, ಸಂಗಮ್, ಬಳತ್(ಬಿ), ಬಳತ್(ಕೆ), ಹಾಲಹಳ್ಳಿ, ಚಾಂದೋರಿ, ತಪಸ್ಯಾಳ, ಬಸನಾಳ, ಕೋರ್ಯಾಳ ಹಾಗೂ ಮತ್ತಿತರೆ ಹಳ್ಳಿಗಳಲ್ಲಿ ಸಚಿವರು ಗ್ರಾಮ ಸಂಚಾರ ನಡೆಸಿದರು. ಸಚಿವರು ಭೇಟಿ ನೀಡಿದ ಗ್ರಾಮಗಳಲ್ಲಿ ಸ್ಥಳೀಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲವೆಡೆ ಮಹಿಳೆಯರು ತಲೆಯ ಮೇಲೆ ಕಳಸ ಹೊತ್ತು, ಆರತಿ ಬೆಳಗಿ ಸಚಿವರನ್ನು ಗ್ರಾಮಕ್ಕೆ ಬರಮಾಡಿಕೊಂಡರು. ಬಳಿಕ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಸಂಘಟನೆಯ ಕುರಿತು ಚರ್ಚಿಸಲಾಯಿತು.
ಸಚಿವ ಪ್ರಭು ಚವ್ಹಾಣ ಮಾತನಾಡಿ, ನಾನು ನಾಲ್ಕು ಲಕ್ಷ ಜನತೆಯ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಜನರ ಸುಃಖ-ದುಃಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ಅಭಿವೃದ್ಧಿ ವಿಷಯವಾಗಿ ಜನರ ಎಲ್ಲ ಬೇಕು ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ತಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲಿರಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಶರಣಪ್ಪ ಪಂಚಾಕ್ಷರಿ, ಕಿರಣ ಪಾಟೀಲ, ದೊಂಡಿಬಾ ನರೋಟೆ, ಶಿವಾನಂದ ವಡ್ಡೆ, ಬಂಟಿ ರಾಂಪೂರೆ ಸೇರಿದಂತೆ ಇತರರಿದ್ದರು.