News Karnataka
ರಾಜಕೀಯ

4 ಕೋಟಿಯ ಕಾಮಗಾರಿಗಳಿಗೆ ಸಚಿವ ಪ್ರಭು ಚವ್ಹಾಣ ಚಾಲನೆ

Minister Prabhu Chavan inaugurates works worth Rs 4 crore
Photo Credit : Ravi Mathapati

ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ  ಮಾರ್ಚ್ 25ರಂದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ವಲ್ಲೇಪೂರ, ಬೇಲೂರ, ನಿಡೋದಾ, ಠಾಣಾಕುಶನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸುಮಾರು 4 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಬೇಲೂರ(ಎನ್)‌ ಗ್ರಾಮದಲ್ಲಿ ಬೇಲೂರಿನಿಂದ ಶೆಂಬೆಳ್ಳಿವರೆಗೆ 3 ಕೋಟಿಯ ರಸ್ತೆ ಕಾಮಗಾರಿ, ವಲ್ಲೇಪೂರನಲ್ಲಿ 25 ಲಕ್ಷದ ರಸ್ತೆ, ನಿಡೋದಾ ಗ್ರಾಮದಲ್ಲಿ ನಿಡೋದಾದಿಂದ ಠಾಣಾಕುಶನೂರ ವರೆಗಿನ 50 ಲಕ್ಷದ ರಸ್ತೆ ಕಾಮಗಾರಿ ಹಾಗೂ ಠಾಣಾಕುಶನೂರನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಾಂಸ್ಕೃತಿಕ ಭವನ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಸಚಿವರು, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ತಾವು ಶಾಸಕರಾದ ನಂತರ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ಕೆಲಸಗಳಾಗಿವೆ. ಎಲ್ಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮ ಸಂಚಾರ ಕೈಗೊಂಡು ಜನರ ಸಮಸ್ಯೆಗಳನ್ನು ಆಲಿಸಿ ಅವರ ಬೇಡಿಕೆಗೆ ಅನುಗುಣ ಆದ್ಯತೆಯ ಮೇಲೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಡಲಾಗಿದೆ. ಅಭಿವೃದ್ಧಿಯ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಠಾಣಾಕುಶನೂರ ವಿರಕ್ತ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿ ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮಶೆಟ್ಡಿ ಪನ್ನಾಳೆ, ಸೂರ್ಯಕಾಂತ ಅಲ್ಮಾಜೆ, ರಾಜಶೇಖರ ಜೀರ್ಗೆ, ಗಿರೀಶ ಒಡೆಯರ್, ಧನರಾಜ ಜೀರ್ಗೆ, ನಾಗಶೆಟ್ಟೆ ಶಂಬೆಳ್ಳೆ, ಶಾಂತಕುಮಾರ ಬೋಚ್ರೆ, ಪ್ರವೀಣ ಕಾರಭಾರಿ, ನಿತೀನ ಪಟೇಲ್ ಹಾಗೂ ಇತರರು ಉಪಸ್ಥಿತರಿದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *