ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವೆಡೆ ಗ್ರಾಮ ಸಂಚಾರ ನಡೆಸಿ ಕಾರ್ಯಕರ್ತರನ್ನು ಭೇಟಿಯಾದರು.
ಹಂಗರಗಾ, ಬೋಂತಿ, ಲಿಂಗಿ, ಸಾವರಗಾಂವ, ಬಾವನಮಟ್ಟಿ ತಾಂಡಾ, ಭವಾನಿನಗರ ತಾಂಡಾ, ಬಾವಲಗಾಂವ, ಭಾಸುತಾಂಡಾ, ಸುರಾ ತಾಂಡಾ, ಕಿಶನನಾಯಕ್ ತಾಂಡಾ, ಕಾಳಾ ಕಾಶಿರಾಮ ತಾಂಡಾ, ಹೊಕ್ರಾಣಾ, ನಂದಿ ಬಿಜಲಗಾಂವ, ಚೊಂಡಿಮುಖೇಡ್, ಸೋಮಲಾ ತಾಂಡಾ, ವಶಿರಾಮ ನಾಯಕ್ ತಾಂಡಾ, ದಾಸಾನಾಯಕ್ ತಾಂಡಾ, ಸೊಸೈಟಿ ತಾಂಡಾ, ಖೇಮಾ ತಾಂಡಾ, ಕಾರಬಾರಿ ತಾಂಡಾ, ಬಬನ್ ನಾಯಕ್ ತಾಂಡಾ, ಚಿಕ್ಲಿ(ಯು) ಸೇರಿದಂತೆ ಹಲವೆಡೆ ಸಂಚಾರ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ರಾಜ್ಯದಲ್ಲಿ ಸಾಕಷ್ಟು ಪ್ರಗತಿ ಕೆಲಸಗಳಾಗಿವೆ. ಹಳ್ಳಿ-ಹಳ್ಳಿಗೂ ರಸ್ತೆ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಶಾಲಾ ಕಾಲೇಜುಗಳು ಅಭಿವೃದ್ಧಿಯಾಗಿವೆ. ಪ್ರತಿ ಗ್ರಾಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ತಲುಪಿವೆ. ಈ ಕುರಿತು ಪಟ್ಟಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಕಾರ್ಯಕರ್ತರು ಅತ್ಯಂತ ಚುರುಕಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸರ್ವರ ಏಳಿಗೆಗೆ ಪ್ರಯತ್ನಿಸಿದೆ. ವಿರೋಧ ಪಕ್ಷದವರು ಇಲ್ಲಸಲ್ಲದ ವಿಷಯಗಳಿಟ್ಟುಕೊಂಡು ಜನರಲ್ಲಿ ಗೊಂದಲ ಹುಟ್ಟಿಸಲು ಪ್ರಯತ್ನಿಸುತಿದ್ದಾರೆ. ಜನರಿಗೆ ಯಾವುದು ಸುಳ್ಳು ಮತ್ತು ಯಾವುದು ಸತ್ಯವೆನ್ನುವ ಬಗ್ಗೆ ಜನರಿಗೆ ತಿಳಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ಶರಣಪ್ಪಾ ಪಂಚಾಕ್ಷರಿ, ಸುರೇಶ ಭೋಸ್ಲೆ, ರಾಜು ಪೋಕಲವಾರ, ಕಿರಣ ಪಾಟೀಲ, ಶಿವರಾಜ ಅಲ್ಮಾಜೆ, ಹಣಮಂತ ಸುರನಾರ, ಸತೀಷ ಪಾಟೀಲ, ಶಿವಾಜಿರಾವ ಪಾಟೀಲ ಮುಂಗನಾಳ, ಸಂಜು ಮುರ್ಕೆ, ಶುಭಂ ಪಾಟೀಲ, ಬಾಲಾಜಿ ವಾಗ್ಮಾರೆ, ಯೋಗೆಶ ಪಾಟೀಲ, ಅಶೋಕರಾವ ಹಲ್ಮಾಡಗೆ, ಕೇರಬಾ ಪವಾರ, ಪ್ರಶಾಂತರೆಡ್ಡಿ ಗುರುಡೆ ಹಾಗೂ ಇತರರು ಉಪಸ್ಥಿತರಿದ್ದರು.