ಔರಾದ: ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ, ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರೈತರ, ಮಹಿಳೆಯರ ರಕ್ಷಣೆ ಸೇರಿ ಸರ್ವ ಜನಾಂಗದ ಐಕ್ಯತೆ ಹಾಗೂ ಬಡವರ ಏಳಿಗೆ ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಭೀಮಸೇನರಾವ ಶಿಂಧೆ ಹೇಳಿದರು.
ತಾಲೂಕಿನ ಬೋರ್ಗಿ (ಜೆ) ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಭರವಸೆಗಳ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡಿ, ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ ಹಾಗೂ ಸರಳ ಆಡಳಿತದ ಬಗ್ಗೆ ಮನವರಿಕೆ ಮಾಡಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬಕ್ಕೆ ಎರಡು ಸಾವಿರ ರೂಪಾಯಿಗಳು, ಹಾಗೂ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಹತ್ತು ಕೆಜಿ ಅಕ್ಕಿ ನೀಡುವ ಹಾಗೂ ಇನ್ನೂರು ಯೂನಿಟ್ ವಿದ್ಯುತ್ ಬಿಲ್ ಅನ್ನು ಉಚಿತವಾಗಿ ನೀಡುವ ಭರವಸೆ ಗ್ಯಾರಂಟಿ ಕಾರ್ಡ್‌ನಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡ ಅಯುಬಖಾನ್ ಪಟೇಲ್ ಮಾತನಾಡಿ, ಔರಾದ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ತಾಲೂಕಿನಲ್ಲಿ ಬಿಜೆಪಿಗೆ ಸೋಲುಣಿಸಿ ಕಾಂಗ್ರೆಸ್ ವಿಜಯ ಸಾಧಿಸಿಬೇಕೆಂದರೆ ಕಾಂಗ್ರೆಸ್ ಪಕ್ಷವು ಸರಳ ಸಜ್ಜನಿಕೆಯ ವ್ಯಕ್ತಿ ಆಗಿರುವ ಡಾ.ಭೀಮಸೇನರಾವ ಶಿಂಧೆ ಅವರಿಗೆ ಟಿಕೇಟ್ ನೀಡಿದರೆ ಮಾತ್ರ ಸಾಧ್ಯ, ತಾಲೂಕಿನ ಅಭಿವೃದ್ಧಿಗಾಗಿ ಡಾ. ಭೀಮಸೇನರಾವ ಶಿಂಧೆ ಅವರಿಗೆ ಬೆಂಬಲ ನೀಡಲಾಗುವುದು ಎಂದರು.
ಗ್ರಾಮದ ಮಹಿಳೆಯರು ಕೋಲಾಟ ಹಾಗೂ ಯುವಕರು ಭಾಜಾ ಭಜಂತ್ರಿಯೊಂದಿಗೆ ಕುಣ್ಣಿದು ಕುಪ್ಪಳಿಸಿ ಪಟಾಕಿ ಸಿಡಿಸುವುದರ ಮೂಲಕ ಗ್ರಾಮಕ್ಕೆ ಸ್ವಾಗತಿಸಿಕೊಂಡು ಗ್ರಾಮದ ಎಲ್ಲಾ ಸಮುದಾಯದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ದರ್ಶನ ಮಾಡಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಗುರುನಾಥ ಕೌಟಗೆ ಕಲ್ಲಪ್ಪ ಕಾಂಬ್ಳೆ, ಖಲೀಲ್ ಪಟೇಲ್, ಘಾಳಪ್ಪ ಎಳಸಪೂರೆ, ಗುಂಡಪ್ಪ ಜೈನಾಪುರೆ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.