News Karnataka
ರಾಜಕೀಯ

ಪ್ರಭು ಚೌಹಾಣ್ ಮುಕ್ತ ಔರಾದ: ರವೀಂದ್ರ ಸ್ವಾಮಿ

Prabhu Chauhan mukt aurad: Ravindra Swami
Photo Credit : Ravi Mathapati

ಔರಾದ: ಔರಾದ ಕ್ಷೇತ್ರದ ಜನತೆಗೆ ಪ್ರಭು ಚೌಹಾಣ್ ಬಹಳ ಅನ್ಯಾಯ, ಮೋಸ ಮಾಡಿದ್ದಾರೆ. ಯಾವುದೇ ಪ್ರಗತಿಪರ ಕೆಲಸ ಮಾಡಿಲ್ಲ ಆದ್ದರಿಂದ ಪ್ರಭು ಚೌಹಾಣ್ ಮುಕ್ತ ಔರಾದ ಮಾಡೋದು ನನ್ನ ಸಂಕಲ್ಪವಾಗಿದೆ ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಮಾಜದವರಿಗೆ ಮಾತ್ರ ಅಭಿವೃದ್ಧಿ ಮಾಡುತ್ತಿದ್ದಾರೆ ಹೊರತು ಅನ್ಯ ಸಮಾಜದವರಿಗೆ ಕಡೆಗಣಿಸುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಸ್ಥಾನದಲ್ಲಿ ತಮ್ಮ ಮಗನನ್ನು ಕಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲ್ಲಲಿ ಬಿಡ್ಲಿ ಆದರೆ ಪ್ರಭು ಚೌಹಾಣ್ ಅವರನ್ನು ಪುನಹ ಮುಂಬೈಗೆ ಕಳಿಸುವುದು ಪಕ್ಕ ಎಂದು ಗುಡುಗಿದರು. ಈ  ಸಂದರ್ಭದಲ್ಲಿ ಗೋರ್ ಸೇನಾ ರಾಜ್ಯಾಧ್ಯಕ್ಷ ಬಾಲು ರಾಠೋಡ, ಕುಮಾರ ದೇಹಮುಖ್, ಪ್ರವೀಣ ಸೇರಿದಂತೆ ಇತರರು ಹಾಜರಿದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *