ಔರಾದ: ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಪ್ರಭು ಚವ್ಹಾಣ ಅವರು ಮೇ.8ರಂದು ಔರಾದ(ಬಿ) ಪಟ್ಟಣದಲ್ಲಿ ಕಾರ್ಯಕರ್ತರ ತಂಡದೊಂದಿಗೆ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು.
ಪಟ್ಟಣದ ರಸ್ತೆ ಬದಿಗಳಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚುವ ಮೂಲಕ ಔರಾದನ ಸಮಗ್ರ ಅಭಿವೃದ್ಧಿಗಾಗಿ ತಮ್ಮನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪಟ್ಟಣದಲ್ಲಿ ಮನೆ-ಮನೆಗೆ ಭೇಟಿ ಕುಟುಂಬದ ಸದಸ್ಯರಿಗೆ ಕರಪತ್ರಗಳನ್ನು ನೀಡಿ ಮೇ.10ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಎಲೆಕ್ಟ್ರಾನಿಕ್ ಮತಯಂತ್ರದಲ್ಲಿನ ಕ್ರಮ ಸಂಖ್ಯೆ 3ರ ಕಮಲದ ಗುರುತಿಗೆ ಅಮೂಲ್ಯವಾದ ಮತದಾನ ಮಾಡುವ ಮೂಲಕ ತಮ್ಮನ್ನು ಗೆಲ್ಲಿಸಬೇಕೆಂದು ಕೋರಿದರು.
ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘೂಳೆ, ದೊಂಡಿಬಾ ನರೋಟೆ, ರಾಜಕುಮಾರ ಪೋಕಲವಾರ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಸೂರ್ಯಕಾಂತ ಅಲ್ಮಾಜೆ, ರಾಧಾಬಾಯಿ ಕೃಷ್ಣ ನರೋಟೆ, ಸಂಗೀತಾ ಯಾದು ಮೇತ್ರೆ, ಗುಂಡಪ್ಪ ಮುಧಾಳೆ, ಅಂಬಿಕಾ ಕೇರಬಾ ಪವಾರ, ದಯಾನಂದ ಘೂಳೆ, ಸುರೇಖಾ ಸೂರ್ಯಕಾಂತ ಸಿಂಘೆ, ಸಂತೋಷ ಪೋಕಲವಾರ, ಸಂಜು ವಡೆಯರ್, ರಾಮ ನರೋಟೆ, ಯಾದು ಮೇತ್ರೆ, ಪ್ರೇರಣಾ ಬಾಬು, ಶಿವಾಜಿ ರಾಠೋಡ್, ಬನ್ಸಿಲಾಲ ನಾಯಕ್, ಶ್ರೀನಿವಾಸ ಖೂಬಾ, ಶಕುಂತಲಾ ಮುತ್ತಂಗೆ, ಅಮರ ಎಡವೆ, ಜಗು ಚಿಟಮೆ, ಸುನೀಲ ಸುಸಲಾದೆ, ರಾಜಕುಮಾರ ಚಿದ್ರೆ, ಶಿವಾಜಿ ಬೋಗಾರ, ಶಿವಾಜಿ ಚವ್ಹಾಣ, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ಆನಂದ ದ್ಯಾಡೆ, ರವಿ ಔರಾದೆ ಹಾಗೂ ಮುಖಂಡರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.