News Karnataka
ರಾಜಕೀಯ

ವಿವಿಧ ಗ್ರಾಮಗಳಿಗೆ ರವೀಂದ್ರ ಸ್ವಾಮಿ ಭೇಟಿ

Ravindra Swamy visits various villages
Photo Credit : Ravi Mathapati

ಔರಾದ: ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಔರಾದ ತಾಲೂಕಿನ ಸಾವರಗಾಂವ, ಬಾದಲಗಾಂವ ಹಾಗೂ ನಂದಿ ಬಿಜಲಗಾಂವ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಬಳಿಕ ಪ್ರತಿ ಮನೆಗಳಿಗೆ ತೆರಳಿ ಹಿರಿಯರ ಹಾಗೂ ತಾಯಂದಿರ ಆಶೀರ್ವಾದ ಪಡೆದು ಮಾತನಾಡಿದ ಅವರು, ಇಂದು ಕ್ಷೇತ್ರದ ಯಾವುದೇ ಹಳ್ಳಿಗಳಿಗೆ ಹೋದರೆ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. ಇಂದಿಗೂ ತಾಯಂದಿರು ಕಿಲೋ ಮೀಟರ್ ಗಟ್ಟಲೇ ದೂರದ ಊರಿಗೆ ಹೋಗಿ ನೀರು ತರಬೇಕಾದ ದುಃಸ್ಥಿತಿ ಇದೆ, ಹಾಲಿ ಶಾಸಕರು 15 ವರ್ಷ ಅಧಿಕಾರದಲ್ಲಿದ್ದರೂ ಏನು ಮಾಡಿದರು? ಎಂದು ಪ್ರಶ್ನೆ ಮಾಡಿದರಲ್ಲದೆ ಅವರಿಂದ ಸಮಸ್ಯೆ ಬಗೆಹರಿಸಲಾಗಲಿಲ್ಲ ಎಂದರು.

ಏಕತಾ ಫೌಂಡೇಶನ್ ಮುಖಂಡ ಸಂದೀಪ ಪಾಟೀಲ ಹಂಗರಗಾ ಮಾತನಾಡಿ, ರವೀಂದ್ರ ಸ್ವಾಮಿಯವರು ತಮ್ಮ ತಾಲೂಕಿಗಾಗಿ ಏನಾದರೂ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಅವರ ಆಸೆಗೆ ನೀರೆರೆದು ಪೋಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಬಾರಿ ಹೊಸ ಮುಖ ರವೀಂದ್ರ ಸ್ವಾಮಿಯವರನ್ನು ಒಂದು ಅವಕಾಶ ಕೊಟ್ಟು ನೋಡೋಣ ಎಂದು ಹೇಳಿದರು.

ಇದೇ ವೇಳೆ ಪ್ರಮುಖರಾದ ಮಾರುತಿ ಲಿಂಗೆ, ಬಾಲಾಜಿ ಭೀಮಾಜಿ, ತುಕಾರಾಮ ಬೋಡೈ, ಕೇಶವ ರಾಮ, ರಾಮ ಭೀಮಾಶಿ, ಗೋಪಾಲ ಗೋನವಾಡ, ಪ್ರಶಾಂತ ಕಾಂಬಳೆ, ಪಂಡರಿ ನಾಯಕ್‌, ಸತೀಶ ಕಾಳೆ, ರಾಮಚಂದ್ರ ಚವ್ಹಾಣ, ಲಕ್ಷಣ ಆಡೆ, ಸಂದೀಪ್‌ ಆಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *