ಔರಾದ: ಏಕತಾ ಫೌಂಡೇಶನ್ ಸಂಸ್ಥಾಪಕ ರವೀಂದ್ರ ಸ್ವಾಮಿ ಅವರು ತಮ್ಮಜಾತಿ ಪ್ರಮಾಣ ಪತ್ರವನ್ನು ಪ್ರಭು ಚವ್ಹಾಣ ಅವರು ರದ್ದು ಪಡಿಸಿದ್ದಾರೆ ಎಂದು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ ತಿಳಿಸಿದರು.
ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಚಿವ ಪ್ರಭು ಚವ್ಹಾಣ ಅವರು ಸಂವಿಧಾನ ಮತ್ತು ಕಾನೂನಿಗಿಂತ ದೊಡ್ಡವರಲ್ಲ. ನ್ಯಾಯಾಲಯದಿಂದ ತಿರಸ್ಕೃತವಾಗಿರುವ ಸ್ವಾಮಿ ಅವರ ಜಾತಿ ಪ್ರಮಾಣ ಪತ್ರ ಪ್ರಭು ಚವ್ಹಾಣ ಅವರಿಂದಾಗಿದೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ. ಕಾನೂನಾತ್ಮಕವಾಗಿ ಪರಿಶೀಲಿಸಿದ ನಂತರ ಪ್ರಮಾಣ ಪತ್ರ ರದ್ದಾಗಿದೆಯೇ ಹೊರತು ಚವ್ಹಾಣ ಅವರಿಂದಲ್ಲಎಂದರು. ಬೇಡ ಜಂಗಮರು ಕೇವಲ ಮಲೆಮಹಾದೇಶ್ವರ ದೇವಸ್ಥಾನದ ಕಾಡಿನಲ್ಲಿ ಮಾತ್ರ ಇದ್ದಾರೆ ಈ ಭಾಗದಲ್ಲಿ ಇಲ್ಲ ಎಂದರು.
ಪ್ರಭು ಚವ್ಹಾಣ ಅವರು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹಾಕಿ ರದ್ದು ಪಡಿಸಿದರೆ, ಹೈಕೋರ್ಟ್ ಯಾಕೆ ರದ್ದು ಪಡಿಸಿದೆ ಎಂದು ಪ್ರಶ್ನಿಸಿದರು? ಸುಮ್ಮನೆ ವಿನಾಕಾರಣ ಒಬ್ಬರ ಮೇಲೆ ಆಪಾದನೆ ಮಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಸಂತ ಬಿರಾದಾರ, ಶರಣಪ್ಪಪಂಚಾಕ್ಷರಿ, ರಾಜು ಪೋಕಲವಾರ, ಶೆಷೆರಾವ್ ಕೋಳಿ, ರಮೇಶ ಬಿರಾದಾರ, ಪ್ರಕಾಶ ಅಲ್ಕಾಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.